More

    ಕೃಷಿ ಸಂಶೋಧನೆಯಿಂದ ಆಹಾರಕ್ಕಿಲ್ಲ ಕೊರತೆ  -ವಿಜ್ಞಾನಿ ಎಂ.ಜಿ. ಬಸವನಗೌಡ ಹೇಳಿಕೆ * ಕೆವಿಕೆಯಲ್ಲಿ ತಂತ್ರಜ್ಞಾನ ತರಬೇತಿ 

    ದಾವಣಗೆರೆ: ಕೃಷಿ ಸಂಶೋಧನೆಗಳಿಂದಾಗಿ ದೇಶದ ಆಹಾರ ಕೊರತೆಯನ್ನು ನೀಗಿಸಲು ಸಹಕಾರಿಯಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ತಿಳಿಸಿದರು.
    ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ 95ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ತಂತ್ರಜ್ಞಾನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಭಾರತದ ಕೃಷಿಯಲ್ಲಿನ ಬೆಳೆಗಳ ಸಂಶೋಧನೆ, ವಿಸ್ತರಣೆ ಮತ್ತು ಕೃಷಿ ಶಿಕ್ಷಣದ ಉನ್ನತೆಗೆ ಶ್ರಮಿಸುತ್ತಿರುವ ಸಂಸ್ಥೆಯಾದೆ. ಇಂದು ಜಗತ್ತಿನಲ್ಲಿ ಆಹಾರ ಸ್ವಾವಲಂಬನೆಯತ್ತ ಭಾರತ ಹೆಜ್ಜೆ ಇಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.
    ದೇಶದ 731 ಕೃಷಿ ವಿಜ್ಞಾನ ಕೇಂದ್ರಗಳು ಸಂಶೋಧನೆ ಮತ್ತು ವಿಸ್ತರಣೆ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿದ್ದು ಇಂದು ಪ್ರತಿ ರೈತರ ಮನೆಮಾತಾಗಿದೆ ಎಂದು ತಿಳಿಸಿದರು. ನಂತರ ವಿದ್ಯಾರ್ಥಿಗಳಿಗೆ ಪೌಷ್ಟಿಕ ಕೈತೋಟ ಕುರಿತು ಮಾಹಿತಿ ನೀಡಲಾಯಿತು.
    ಮಣ್ಣು ವಿಜ್ಞಾನಿ ಎಚ್.ಎಂ. ಸಣ್ಣಗೌಡರ್ ಮಾತನಾಡಿ, ಮಣ್ಣು ಪರೀಕ್ಷೆ ಮಾಡಿಸಿ ಲಘು ಪೋಷಕಾಂಶಗಳನ್ನು ನೀಡುವುದರಿಂದ ಭೂಮಿಯಲ್ಲಿ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
    ನಂತರ ವಿದ್ಯಾರ್ಥಿಗಳನ್ನು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಪರೀಕ್ಷಾ ಪ್ರಯೋಗಾಲಯ, ವಿವಿಧ ಪ್ರಾತ್ಯಕ್ಷಿಕೆ ಘಟಕಗಳಿಗೆ ಕರೆದೊಯ್ದು ಅದರ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಲಾಯಿತು.
    ಕೃಷಿ ವಿಸ್ತರಣಾ ತಜ್ಞ ಜೆ.ರಘುರಾಜ ಮಾತನಾಡಿ ನೈಸರ್ಗಿಕ ಕೃಷಿ ಪ್ರಾತ್ಯಕ್ಷಿಕೆ ಘಟಕ ಯೋಜನೆಯ ಉದ್ದೇಶ ಹಾಗೂ ಕೇಂದ್ರದಲ್ಲಿ ತಯಾರಿಸುತ್ತಿರುವ ಜೈವಿಕ ಗೊಬ್ಬರಗಳು, ಜೈವಿಕ ಕೀಟನಾಶಕಗಳ ಬಗ್ಗೆ ವಿವರಣೆ ನೀಡಿದರು.
    ರೈತ ಉತ್ಪಾದಕ ಕಂಪನಿಯ ಉತ್ಪನ್ನಗಳ ವಸ್ತು ಪ್ರದರ್ಶನ, ಜೈವಿಕ ಇಂಧನ ಘಟಕಗಳ ಕಿರು ಮಾದರಿಗಳು, ಕೃಷಿ ಸಲಕರಣೆಗಳ ಬಗ್ಗೆ ಮಾಹಿತಿ ನೀಡಲಾಯಿತು. ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಡಿ.ಎನ್. ದೇವರಾಜ, ಮಾಗನೂರು ಬಸಪ್ಪ ಕಾಲೇಜಿನ ಉಪನ್ಯಾಸಕಿ ಡಾ. ಅನಿತಾ, ಎಚ್.ದೊಡ್ಡಗೌಡರು, ಕಾಂತರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts