More

    ಕಾರ್ಮಿಕರಿಗೆ 60 ವರ್ಷ ಬಳಿಕ ನಿಶ್ಚಿತ ಪಿಂಚಣಿ ಎಂದ ಚಂದು ಪಾಟೀಲ್

    ಕಲಬುರಗಿ: ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಎಲ್ಲ ತೆರನಾದ ಕಾರ್ಮಿಕರಿಗೆ 60 ವರ್ಷಗಳ ಬಳಿಕ ನಿಶ್ವಿತ ಪಿಂಚಣಿ ನೀಡಲು ಕೇಂದ್ರ ಸರ್ಕಾರವು ಇ-ಶ್ರಮ, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ – ಧನ್ ಯೋಜನೆ ಜಾರಿಗೊಳಿಸಿದೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃಧ್ಧಿ ನಿಗಮ (ಕೆಡಲ್) ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಹೇಳಿದರು.

    ಕಾರ್ಮಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಂಯುಕ್ತಾಶ್ರಯದಲ್ಲಿ ಬುಧವಾರ ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಪತ್ರಕರ್ತರಿಗೆ, ಮಾಧ್ಯಮ ಛಾಯಾಗ್ರಾಹಕರಿಗೆ, ಮಾಧ್ಯಮ ಉದ್ಯೋಗಿಗಳಿಗೆ ಹಾಗೂ ಪತ್ರಿಕಾ ವಿತರಕರಿಗೆ ಇ-ಶ್ರಮ ಯೋಜನೆ ಮತ್ತು ಪಿಎಂ ಶ್ರಮ ಯೋಗಿ ಮಾನ್- ಧನ್ ಕಾರ್ಡ್ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಲಾಭವನ್ನು ಎಲ್ಲರು ಪಡೆದುಕೊಳ್ಭಬೇಕು ಎಂದರು.

    ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಶ್ರಮಿಕರು, ರೈತರು, ಜನರ ಹಿತ ಕಾಪಾಡುವುದರ ಜತೆಗೆ ಅವರಿಗೂ ಸಾಮಾಜಿಕ ಭದ್ರತೆ ಕಲ್ಪಿಸಲು ಹಲವು ಯೋಜನೆ ರೂಪಿಸಿದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್- ಧನ್ ಯೋಜನೆಯಡಿ ರೈತರು, ಕೃಷಿ ಕಾರ್ಮಿಕರು ಸೇರಿದಂತೆ ಅರ್ಹರಿರುವ ಎಲ್ಲರು ನೋಂದಾಯಿಸಿಕೊಂಡು ನಿಗದಿತ ವಂತಿಗೆ ಪಾವತಿಸಿ ಕಾರ್ಡ್ ಪಡೆದುಕೊಂಡರೆ 60 ವಷಗಳ ನಂತರ ನಿಶ್ಚಿತ ಪಿಂಚಣಿ ಸಿಗಲಿದೆ. ಇದೊಂದು ಐತಿಹಾಸಿಕ ಯೋಜನೆಯಾಗಿದೆ ಎಂದರು.

    ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಅವರು ಮಾತನಾಡಿ, ಇ-ಶ್ರಮ ಯೋಜನೆ ಮತ್ತು ಪಿಎಂ ಶ್ರಮ ಯೋಗಿ ಮಾನ್- ಧನ್ ಕಾರ್ಡ್ ವಿತರಣೆ ಶಿಬಿರವು ಗುರುವಾರ ಸಹ ಮುಂದುವರೆಯಲಿದೆ. ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಪಿಎಫ್, ಇಎಸ್‌ಐ ಸೌಲಭ್ಯ ಹೊಂದಿಲ್ಲದಿರುವ ಎಲ್ಲರು ಅರ್ಹರಿದ್ದು, ಇದರ ಲಾಭ ಪಡೆದುಕೊಳ್ಳಬೇಕೆಂದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ದೇವೇಂದ್ರಪ್ಪ ಆವಂಟಿ, ರಾಮಕೃಷ್ಣ ಬಡಶೇಷಿ, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ರಾಜ್ಯ ಸಮಿತಿ ಸದಸ್ಯ ಡಾ.ಶಿವರಂಜನ್ ಸತ್ಯಂಪೇಟೆ, ಖಜಾಂಚಿ ಅಶೋಕ ಕಪನೂರ, ಕಾರ್ಯದರ್ಶಿ ಅರುಣ ಕದಂ ಮೊದಲಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts