More

    ಎಂ.ಬಿ. ಪಾಟೀಲ ಕೋರಿಕೆಗೆ ಸ್ಪಂದನೆ, ಬಜೆಟ್ ನಲ್ಲಿ ಫುಡ್ ಪಾರ್ಕ್ ಗೆ ಆದ್ಯತೆ: ಸಚಿವ ಬಿ.‌ಸಿ.ಪಾಟೀಲ

    ವಿಜಯಪುರ: ಎಂ.ಬಿ. ಪಾಟೀಲರ ಕೋರಿಕೆ ಮೇರೆಗೆ ಇಟ್ಟಂಗಿಹಾಳದಲ್ಲಿ ಫುಡ್ ಪಾರ್ಕ್ ನಿರ್ಮಿಸಲು ಬಜೆಟ್ ನಲ್ಲಿ ಆದ್ಯತೆ ನೀಡುವುದಾಗಿ ಕೃಷಿ ಸಚಿವ ಸಿ.ಸಿ. ಪಾಟೀಲ ಭರವಸೆ ನೀಡಿದರು.

    ಸೋಮವಾರ ಇಲ್ಲಿನ ಇಟ್ಟಂಗಿಹಾಳದಲ್ಲಿ ನಿಗದಿತ ಫುಡ್ ಪಾರ್ಕ್ ಸ್ಥಳ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಎಂ. ಬಿ. ಪಾಟೀಲ ಅವರು ಫುಡ್ ಪಾರ್ಕ್ ನ ಇರ್ಮಾಣಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿದ್ದರು. ಅವರ ಬೇಡಿಕೆಗೆ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿರುವೆ.
    ಸದರಿ ಜಾಗೆ ಫುಡ್ ಪಾರ್ಕ್ ಗೆ ಸೂಕ್ತ ಜಾಗೆ ಇದೆ. ಕೂಡಲೇ ಪ್ರಸ್ತಾವನೆ ಸಿದ್ದಪಡಿಸಿ ಸಿಎಂಗೆ ಸಲ್ಲಿಸಲಾಗುವುದು ಎಂದರು.

    ಕೃಷಿ ವಿಸ್ತರಣಾ ಕೇಂದ್ರ ಸ್ಥಳಾಂತರಕ್ಕೆ ವಿಚಾರ ಮಾಡಿಲ್ಲ. ಬೇಕಾದರೆ ಮುದ್ದೇಬಿಹಾಳಕ್ಕೆ ಹೊಸ ಕೇಂದ್ರ ಸ್ಥಾಪಿಸಲು ಚಿಂತನೆ ನಡೆಸಲಾಗುವುದು.

    ಶಿವಮೊಗ್ಗದಲ್ಲಿ ಸಾವಯವ ಕೃಷಿ ವಿವಿ ಸ್ಥಾಪನೆಗೆ ಸಂಬಂಧಿಸಿದಂತೆ ಇನ್ನೂ ಚಿಂತನೆ ನಡೆದಿದೆ. ಆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದರು.

    ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ತೋಟಗಾರಿಕೆ, ಲಿಂಬೆ, ದ್ರಾಕ್ಷಿ ಮುಂತಾದ ಬೆಳೆಗಳಿಗೆ ಸಂಬಂಧಿಸಿದಂತೆ ಫುಡ್ ಪಾರ್ಕ್ ಮಾಡಲು ಮನವಿ ಮಾಡಿದ್ದೆ. ಆ ನಿಟ್ಟಿನಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಸ್ಪಂದಿಸಿ ಭೇಟಿ ನೀಡಿದ್ದಾರೆ. ಸಾರ್ವತ್ರಿಕವಾಗಿ ಫುಡ್ ಪಾರ್ಕ್ ಗೆ ಅವಕಾಶ ಕಲ್ಪಿಸಿದರೆ ಸಾಕಷ್ಟು ಅನುಕೂಲವಾಗಲಿದೆ. ಉದ್ಯೋಗವಕಾಶಗಳು ಹೆಚ್ಚಲಿವೆ. ಫುಡ್ ಪಾರ್ಕ್ ಹಾಗೂ ವೈನ್ ಪಾರ್ಕ್ ನಿರ್ಮಾಣದ ಜಾಗೆ ಸೇರಿ ಸುಮಾರು 200 ಎಕರೆ ಜಾಗೆ ಇದೆ. ಸದರಿ ಜಾಗೆಯಲ್ಲಿ ಫುಡ್ ಪಾರ್ಕ್ ನಿರ್ಮಿಸಿದರೆ ಎಲ್ಲರಿಗೂ ಅನುಕೂಲವಿದೆ ಎಂದರು.
    ನವ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ,
    ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ‌ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts