More

    ಉನ್ನತ ಸಾಧನೆಗೆ ಸಂಸ್ಕಾರಯುತ ಶಿಕ್ಷಣವೇ ಕಾರಣ

    ಧಾರವಾಡ: ಜನತಾ ಶಿಕ್ಷಣ ಸಮಿತಿ (ಜೆಎಸ್​ಎಸ್) ಶಿಕ್ಷಣ ಸಂಸ್ಥೆಗಳು ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದರಿಂದ ಇಷ್ಟು ಉನ್ನತ ಮಟ್ಟಕ್ಕೆ ಬೆಳೆದು ನಿಂತಿವೆ. ಶಿಕ್ಷಣ ಸಂಸ್ಥೆಗಳ ಪ್ರಗತಿಗೆ ಮಹಾದ್ವಾರವೇ ಸಾಕ್ಷಿ. 1973ರ ಆರ್ಥಿಕ ಸಂಕಷ್ಟದಿಂದ ಹೊರ ಬಂದ ಶಿಕ್ಷಣ ಸಮಿತಿ ಇದೀಗ ಉತ್ತರ ಕರ್ನಾಟಕದಲ್ಲಿ ತನ್ನದೇ ಛಾಪು ಮೂಡಿಸಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

    ಇಲ್ಲಿನ ವಿದ್ಯಾಗಿರಿಯ ಜೆಎಸ್​ಎಸ್ ನೂತನವಾಗಿ ನಿರ್ವಿುಸಿರುವ ಮಹಾದ್ವಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಜೆಎಸ್​ಎಸ್ 25 ಅಂಗ ಸಂಸ್ಥೆಗಳನ್ನು ಹೊಂದಿದ್ದು, ಅವುಗಳಿಗೆ ಮುಕುಟ ಪ್ರಾಯವಾದ ಈ ಮಹಾದ್ವಾರ ಶಿಕ್ಷಣ ಅರಸಿ ಬರುವವರಿಗೆ ಸದಾ ತೆರೆದಿರುತ್ತದೆ. ಡಾ. ನ. ವಜ್ರಕುಮಾರ ಅವರ ಅವಿರತ ಶ್ರಮ ಅಭಿವೃದ್ಧಿ ಕಾರ್ಯಗಳಿಗೆ ಕಾರಣ. ಸಿಬ್ಬಂದಿ ಕರ್ತವ್ಯ, ಪಾಲನೆ, ಪೋಷಕರ ಸಹಕಾರದಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿದೆ. ಆಡಳಿತ ವಹಿಸಿಕೊಂಡು 47 ವರ್ಷಗಳಲ್ಲಿ ಹಲವು ವಿದ್ಯಾ ಸಂಸ್ಥೆಗಳನ್ನು ಧಾರವಾಡದಲ್ಲಿ ಪ್ರಾರಂಭಿಸಿದ್ದೇವೆ ಎಂದರು.

    1973ರಲ್ಲಿ ಆಡಳಿತ ತೆಗೆದುಕೊಂಡಾಗ ಮುಳಗುವ ದೋಣಿ ಎಂದು ಹಲವರ ಭಾವನೆಯಾಗಿತ್ತು. ಆದರೆ, ಪೇಜಾವರ ಶ್ರೀಗಳ ಆಶೀರ್ವಾದದಿಂದ ಇಷ್ಟೆಲ್ಲ ಸಾಧನೆ ಸಾಧ್ಯವಾಗಿದೆ. ಇನ್ನು ಮುಚ್ಚುವ ಪ್ರಶ್ನೆಯೇ ಇಲ್ಲ, ಶಸಕ್ತರಾಗಿದ್ದೇವೆ. ಇನ್ನೂ ಹೆಚ್ಚಿನ ಸಂಸ್ಥೆಗಳನ್ನು ತೆರೆಯುತ್ತೇವೆ. ತ್ಯಾಗ ಮನೋಭಾವನೆಯೇ ಜೆಎಸ್​ಎಸ್ ಸಂಸ್ಕೃತಿ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದ್ದಕ್ಕೆ ವರ್ಷದಿಂದ ವರ್ಷಕ್ಕೆ ಸಂಸ್ಥೆ ಬೆಳೆಯುತ್ತಿದೆ ಎಂದರು. ಸಂಸ್ಥೆ ಕಾರ್ಯದರ್ಶಿ ಡಾ. ನ.ವಜ್ರಕುಮಾರ, ಆಡಳಿತ ಮಂಡಳಿ ಸದಸ್ಯರಾದ ಕಮಲ ಮೆಹತಾ, ಕೇಶವ ದೇಸಾಯಿ, ಸುಧೀರ ಕುಸನಾಳೆ, ಎಸ್​ಡಿಎಂ ಕಾರ್ಯದರ್ಶಿ ಜೀವಂಧರಕುಮಾರ, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ, ಇತರರು ಇದ್ದರು.

    ಜೆಎಸ್​ಎಸ್ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಆರ್.ವಿ. ಪಾಟೀಲ ನಿರೂಪಿಸಿದರು. ಮಹಾವೀರ ಉಪಾಧ್ಯೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts