More

    ಆಧುನಿಕ ಶಿಕ್ಷಣದಲ್ಲಿದೆ ಸಂತೃಪ್ತ ಜೀವನ – ಪ್ರೊ. ಕೆ.ಬಿ.ರಂಗಪ್ಪ -ಎವಿಕೆ ಕಾಲೇಜಿನಲ್ಲಿ ಪದವಿ ದಿನ

    ದಾವಣಗೆರೆ: ಆಧುನಿಕ ಶಿಕ್ಷಣ ಪದ್ಧತಿಯು ಅನೇಕ ಜ್ಞಾನ ಶಿಸ್ತುಗಳನ್ನು ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಟ್ಟಿದೆ. ಇದರೊಂದಿಗೆ ಸಂತೃಪ್ತ ಜೀವನ ನಡೆಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಕೆ.ಬಿ.ರಂಗಪ್ಪ ತಿಳಿಸಿದರು.

    ನಗರದ ಎ.ವಿ.ಕೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಭವಿಷ್ಯದ ಶೈಕ್ಷಣಿಕ ಸಾಧನೆಯ ಜತೆಗೆ ಸಾಮಾಜಿಕ, ಕೌಟುಂಬಿಕ ಜೀವನವೂ ಕೂಡ ಯಶಸ್ಸು ಮತ್ತು ತೃಪ್ತಿಕರ ಆಗಿರಬೇಕು. ಹಾಗಾದರೆ ಮಾತ್ರ ಬದುಕಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
    ಇಂದಿನದು ಕೃತಕ ಬುದ್ದಿಮತ್ತೆಯ ಯುಗ. ಇದರ ಮೂಲಕ ಜಗತ್ತು ಹೊಸ ಆವಿಷ್ಕಾರಗಳನ್ನು ನಡೆಸುತ್ತಿದೆ. ಬದಲಾದ ಕಾಲಕ್ಕೆ ಒಳ್ಳೆಯ ಶಿಕ್ಷಣ ಪಡೆದು ಸನ್ಮಾರ್ಗದತ್ತ ಸಾಗಬೇಕು.ಅತಿಯಾಸೆ ಬಿಟ್ಟುಇದ್ದುದರಲ್ಲೇ ತೃಪ್ತಿ ಪಡಬೇಕು ಎಂದು ಕಿವಿಮಾತು ಹೇಳಿದರು.
    ಕಾರ್ಯಕ್ರಮ ಉದ್ಘಾಟಿಸಿದ ಬಾಪೂಜಿ ವಿದ್ಯಾಸಂಸ್ಥೆ ಉಪಾಧ್ಯಕ್ಷೆ ಕಿರುವಾಡಿ ಗಿರಿಜಮ್ಮ ಮಾತನಾಡಿ, ನಿಮ್ಮ ಯಶಸ್ಸಿನ ಹಿಂದೆ ಗುರುಗಳ ಪರಿಶ್ರಮವಿದೆ. ಹೆಣ್ಣುಮಕ್ಕಳು ಶಿಕ್ಷಣ ಪಡೆಯುವ ಮೂಲಕ ಇನ್ನೂ ಹೆಚ್ಚು ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಗಂಡು-ಹೆಣ್ಣು ಎಂಬ ಭೇದ ಮರೆತು ಸಹಬಾಳ್ವೆಯಿಂದ ಒಟ್ಟಿಗೆ ಬಾಳುವ ಗುರಿ ನಿಮ್ಮದಾಗಿರಬೇಕು ಎಂದು ಕಿವಿಮಾತು ಹೇಳಿದರು.
    ನಿವೃತ್ತ ಪ್ರಾಧ್ಯಾಪಕಿ ಡಾ. ಪಿ.ಎಂ. ಅನುರಾಧಾ ಮಾತನಾಡಿ ಶಿಕ್ಷಣ ಕೇವಲ ಪರೀಕ್ಷೆ ಬರೆದು ಪ್ರಮಾಣಪತ್ರ ಪಡೆಯುವ ಹಂತವಲ್ಲ. ನಿಮ್ಮನ್ನು ನೀವು ಗುರುತಿಸಿಕೊಳ್ಳುವ, ಆ ಮೂಲಕ ಹೊಸದನ್ನು ಸಮಾಜಕ್ಕೆ, ದೇಶಕ್ಕೆ ಕೊಡುಗೆ ನೀಡುವ ಜವಾಬ್ದಾರಿ ಆಗಿದೆ ಎಂದು ತಿಳಿಸಿದರು.
    ಕಾಲೇಜಿನ ಪ್ರಾಚಾರ್ಯೆ ಕಮಲಾ ಸೊಪ್ಪಿನ್ ಮಾತನಾಡಿ ನಮ್ಮ ಕಾಲೇಜಿನಲ್ಲಿ ಮೊದಲ ಬಾರಿಗೆ ಪದವಿ ದಿನ ಆಚರಣೆ ಮಾಡುತ್ತಿದ್ದೇವೆ. ಇದೊಂದು ಮೈಲಿಗಲ್ಲು ದಿನ ಎಂದು ಹೇಳಿದರು. ಗೌನ್-ಟೊಪ್ಪಿಗೆ ಧರಿಸಿದ್ದ ಕಾಲೇಜಿನ 195 ವಿದ್ಯಾರ್ಥಿನಿಯರು ಪದವಿ ಪ್ರಮಾಣಪತ್ರ ಸ್ವೀಕರಿಸಿದರು.
    2022-23ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ರ‌್ಯಾಂಕ್ ವಿಜೇತರಾದ ಭೂಮಿಕಾ ಹೊಳಲ್, ಎಲ್.ಎ.ಕಿರಣ್‌ಕುಮಾರಿ, ಎಸ್.ಎಚ್. ಸಯೀದಾ ಉಮ್ಮೆಹಾನಿ, ಟಿ. ಐಶ್ವರ್ಯಾ ಅವರನ್ನು ಗೌರವಿಸಲಾಯಿತು.
    ಐಕ್ಯುಎಸಿ ಸಂಯೋಜಕ ಪ್ರೊ. ಆರ್.ಆರ್. ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಪ್ರಭಾವತಿ ಎಸ್. ಹೊರಡಿ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಆರ್. ಚನ್ನಬಸವನಗೌಡ ವಂದಿಸಿದರು. ಕೆ.ಎಂ.ಲಕ್ಷ್ಮೀ , ಕೆ. ನಿಸರ್ಗ ಕಾರ್ಯಕ್ರಮ ನಿರೂಪಿಸಿದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts