ಇಂದು ಆಸೀಸ್-ಆಫ್ರಿಕಾ ಮುಖಾಮುಖಿ: ಪುಟಿದೇಳುವ ಹಂಬದಲ್ಲಿ ಆಸ್ಟ್ರೇಲಿಯಾ

ಲಖನೌ: ಏಕದಿನ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಆತಿಥೇಯ ಟೀಮ್ ಇಂಡಿಯಾ ವಿರುದ್ಧ ಸೋಲು ಅನುಭವಿಸಿರುವ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ರನ್‌ಮಳೆ ಹರಿಸಿ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡಗಳು ಏಕನಾ ಕ್ರೀಡಾಂಗಣದಲ್ಲಿ ಗುರುವಾರ ಮುಖಾಮುಖಿ ಆಗಲಿವೆ. ಈ ಕ್ರೀಡಾಂಗಣ ಮೊದಲ ಬಾರಿಗೆ ವಿಶ್ವಕಪ್ ಆತಿಥ್ಯ ವಹಿಸಲಿದೆ. ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿರುವ ಆಸೀಸ್ ಬ್ಯಾಟಿಂಗ್ ಕ್ರಮಾಂಕ ಬಲಪಡಿಸಲು ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್‌ರನ್ನು ಆಡುವ 11ರ ಬಳಗಕ್ಕೆ ಕರೆತರುವ ಸಾಧ್ಯತೆಯಿದೆ. ಲಂಕಾವನ್ನು … Continue reading ಇಂದು ಆಸೀಸ್-ಆಫ್ರಿಕಾ ಮುಖಾಮುಖಿ: ಪುಟಿದೇಳುವ ಹಂಬದಲ್ಲಿ ಆಸ್ಟ್ರೇಲಿಯಾ