ಮತಗಟ್ಟೆಗೆ ಬಣ್ಣದ ಚಿತ್ತಾರ

-ಸಂದೀಪ್ ಸಾಲ್ಯಾನ್ ಬಂಟ್ವಾಳ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ 9 ಮತಗಟ್ಟೆಗಳಲ್ಲಿ ಬಣ್ಣದ ಚಿತ್ತಾರಗಳು ಪಡಿಮೂಡುತ್ತಿವೆ. ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವ ಉದ್ದೇಶದಿಂದ 9 ಮಾದರಿ ಮತಗಟ್ಟೆಗಳನ್ನಾಗಿ ರೂಪಿಸಿದ್ದು, ಚಿತ್ರಕಲಾ ಶಿಕ್ಷಕರ ತಂಡ ಮತಗಟ್ಟೆಗಳನ್ನು ಚಿತ್ರಗಳಿಂದ ಅಲಂಕರಿಸಿ ಹೊಸ ಲುಕ್ ನೀಡುತ್ತಿದ್ದಾರೆ. ಮತಗಟ್ಟೆಗಳಲ್ಲಿ ಚಿತ್ರ ಬಿಡಿಸುವ ಕಾರ್ಯ ಮಾ.23ರಂದು ಆರಂಭಗೊಂಡಿದ್ದು, ಮುಂದಿನ 10-15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. 13 ಚಿತ್ರಕಲಾ ಶಿಕ್ಷಕರಿಗೆ ಜವಾಬ್ದಾರಿ ನೀಡಲಾಗಿದ್ದು, ಶಿಕ್ಷಕರು ಮೂರು ತಂಡಗಳಾಗಿ ಚಿತ್ತಾರಗಳನ್ನು ಬಿಡಿಸಲಿದ್ದಾರೆ. ಒಟ್ಟು 5 ವಿಷಯಗಳಲ್ಲಿ ಚಿತ್ರ ಬಿಡಿಸಲಾಗುವುದು. … Continue reading ಮತಗಟ್ಟೆಗೆ ಬಣ್ಣದ ಚಿತ್ತಾರ