4 ವರ್ಷಗಳ ಜೈಲು ವಾಸ ಅಂತ್ಯ: ಜೈಲಿನಿಂದ ಬಿಡುಗಡೆಯಾದ ಚಿನ್ನಮ್ಮ

ಬೆಂಗಳೂರು: ನಾಲ್ಕು ವರ್ಷಗಳ ಸುದೀರ್ಘ ಜೈಲು ವಾಸದಿಂದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ನಟರಾಜನ್ ಬಂಧಮುಕ್ತರಾಗಿದ್ದಾರೆ. ಬುಧವಾರ (ಜ. 27) ಬೆಳಗ್ಗೆ ಶಶಿಕಲಾ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಶಶಿಕಲಾ ಕಳೆದ ನಾಲ್ಕು ವರ್ಷದಿಂದ ಜೈಲು ವಾಸ ಅನುಭವಿಸಿದ್ದಾರೆ. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಗಿದ್ದ ಶಶಿಕಲಾ ಇಂದು ಬಿಡುಗಡೆಯಾಗಿದ್ದಾರೆ. ಇದಕ್ಕೂ ಮುನ್ನ ಸಾವಿರಾರು ಅಭಿಮಾನಿಗಳು ಶಶಿಕಲಾರನ್ನು ಕರೆದೊಯ್ಯಲು ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ್ದರು. ಕರೊನಾ ಸೋಂಕು ಹಿನ್ನೆಲೆ ಶಶಿಕಲಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. … Continue reading 4 ವರ್ಷಗಳ ಜೈಲು ವಾಸ ಅಂತ್ಯ: ಜೈಲಿನಿಂದ ಬಿಡುಗಡೆಯಾದ ಚಿನ್ನಮ್ಮ