ಕರೊನಾವನ್ನು ಮಣಿಸಿದ ಕುಸ್ತಿ ತಾರೆ ವಿನೇಶ್ ಪೋಗಟ್

ನವದೆಹಲಿ: ಭಾರತದ ಅಗ್ರ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಕರೊನಾ ಸೋಂಕಿನಿಂದ ಮುಕ್ತರಾಗಿದ್ದಾರೆ. ಕಳೆದ ವಾರವಷ್ಟೇ ಪಾಸಿಟಿವ್ ಆಗಿದ್ದ ಅವರು ಈಗ ಕೋವಿಡ್-19 ಪರೀಕ್ಷೆಯಲ್ಲಿ 2 ಬಾರಿ ನೆಗೆಟಿವ್ ಆಗಿದ್ದಾರೆ. ಆದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಐಸೋಲೇಷನ್‌ನಲ್ಲೇ ಮುಂದುವರಿಯಲಿದ್ದಾರೆ. 24 ವರ್ಷದ ವಿನೇಶ್ ಪೋಗಟ್ ಕಳೆದ ವಾರ ಪಾಸಿಟಿವ್ ವರದಿ ಬಂದ ಕಾರಣದಿಂದಾಗಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭದಿಂದ ಹೊರಗುಳಿದಿದ್ದರು. ಇದರಿಂದಾಗಿ ಅವರಿಗೆ ಆಗಸ್ಟ್ 29ರಂದು ರಾಷ್ಟ್ರಪತಿಯಿಂದ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್‌ರತ್ನ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. … Continue reading ಕರೊನಾವನ್ನು ಮಣಿಸಿದ ಕುಸ್ತಿ ತಾರೆ ವಿನೇಶ್ ಪೋಗಟ್