ಬಾಲಿವುಡ್ ಹಿರಿಯ ನಟಿ ಶಶಿಕಲಾ ನಿಧನ

ಮುಂಬೈ : ಬಾಲಿವುಡ್​ನ ಹಿರಿಯ ನಟಿ ಶಶಿಕಲಾ ಅವರು ಇಂದು ತಮ್ಮ ಕೊಲಾಬಾದ ನಿವಾಸದಲ್ಲಿ ಕೊನೆಯುಸಿರೆಳೆದರು. ನೂರಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದ ಶಶಿಕಲಾ, 88 ವರ್ಷ ವಯಸ್ಸಿನವರಾಗಿದ್ದರು. ಕಪ್ಪು ಬಿಳುಪು ಚಿತ್ರಗಳಲ್ಲಿ ಮತ್ತು ಈಸ್ಟ್​ಮನ್​ ಕಲರ್ ಚಿತ್ರಗಳಲ್ಲಿ ನಟಿಸಿದ್ದಲ್ಲದೆ, ಇತ್ತೀಚಿನ ಹೈಟೆಕ್ ಚಿತ್ರಗಳಲ್ಲೂ ಕೆಲಸ ಮಾಡಿದ ಹೆಗ್ಗಳಿಕೆ ಅವರದ್ದಾಗಿತ್ತು. ಆಗಸ್ಟ್ 1932 ರಲ್ಲಿ ಮಹಾರಾಷ್ಟ್ರದ ಸೋಲಾಪುರಕ್ಕೆ ಸೇರಿದ ಕುಟುಂಬದಲ್ಲಿ ಜನಿಸಿದ ಶಶಿಕಲಾ, 2007ನೇ ವರ್ಷದ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ಪಡೆದಿದ್ದರು. 2009 ರಲ್ಲಿ ವಿ.ಶಾಂತಾರಾಂ ಅವಾರ್ಡ್ಸ್​ನ … Continue reading ಬಾಲಿವುಡ್ ಹಿರಿಯ ನಟಿ ಶಶಿಕಲಾ ನಿಧನ