ಒಲಿಂಪಿಕ್ಸ್‌ನಲ್ಲಿ ಉಸೇನ್ ಬೋಲ್ಟ್ ಉತ್ತರಾಧಿಕಾರಿ ಇಂದು ನಿರ್ಧಾರ

ಟೋಕಿಯೊ: ಕಳೆದ 3 ಒಲಿಂಪಿಕ್ಸ್‌ಗಳಲ್ಲಿ ನಿರ್ವಿವಾದಿತವಾಗಿ ಅತಿವೇಗದ ಓಟಗಾರ ಎನಿಸಿದ್ದ ಜಮೈಕಾದ ದಿಗ್ಗಜ ಉಸೇನ್ ಬೋಲ್ಟ್ ಗೈರಿನಲ್ಲಿ ಈ ಬಾರಿ 100 ಮೀಟರ್ ಓಟದಲ್ಲಿ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಭಾನುವಾರ ಉತ್ತರ ಲಭಿಸಲಿದೆ. ಕೆನಡದ ಆಂಡ್ರೆ ಡಿ ಗ್ರಾಸ್ ಹೀಟ್ಸ್‌ನಲ್ಲಿ 9.91 ಸೆಕೆಂಡ್‌ನಲ್ಲಿ ಓಡಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ಗೇರುವ ಮೂಲಕ ನಿರೀಕ್ಷೆ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ. 2016ರ ಕಂಚು ವಿಜೇತ ಡಿ ಗ್ರಾಸ್, ಈ ಬಾರಿ ಫೇವರಿಟ್ ಆಗಿ ಮೂಡಿಬಂದಿದ್ದಾರೆ. ಅಮೆರಿಕದ ಬೇಕರ್ ರೋನಿ (10.03), ಫ್ರೆಡ್ … Continue reading ಒಲಿಂಪಿಕ್ಸ್‌ನಲ್ಲಿ ಉಸೇನ್ ಬೋಲ್ಟ್ ಉತ್ತರಾಧಿಕಾರಿ ಇಂದು ನಿರ್ಧಾರ