ಊಟ ಮಾಡುವಾಗ ಮೊಬೈಲ್​ ಬಳಸಲು ಕಿರಿಕಿರಿಯೇ? ನಿಮಗಾಗಿ ಬಂದಿದೆ ನೋಡಿ ಆಧುನಿಕ ತಟ್ಟೆ!

ನವದೆಹಲಿ: ಆಧುನಿಕ ಜಗತ್ತಿನಲ್ಲಿ ಮೊಬೈಲ್​ ಫೋನ್​ಗಳು ಮಾನವನ ಜೀವನದ ಭಾಗವಾಗಿವೆ. ಪ್ರತಿನಿತ್ಯ ಸಮಯ ಸಿಕ್ಕಾಗಲೆಲ್ಲಾ ಮೊಬೈಲ್​ ಫೋನ್​ ಹಿಡಿದುಕೊಂಡು ಜಾಲತಾಣದಲ್ಲಿ ಸಿಗವಂತಹ ಮಾಹಿತಿ ಮನರಂಜನೆಯನ್ನು ಸ್ಕ್ರಾಲ್​ ಡೌನ್​ ಮಾಡುತ್ತಿರುತ್ತೇವೆ. ಮೊಬೈಲ್​ ಬಳಸುತ್ತಾ ಊಟ ಮಾಡುವಾಗ ಕೆಲವೊಮ್ಮೆ ಮೊಬೈಲ್​ ಕೈಜಾರಿ ತಟ್ಟೆಯೊಳಗಿನ ಸಾಂಬರಿಗೂ ಬಿದ್ದಿದ್ದನ್ನು ನೋಡಿರುತ್ತೇವೆ. ಇದೀಗ ಈ ರೀತಿಯ ಕಿರಿಕಿರಿಗಳು ಮುಂದೆ ಎದುರಾಗದಿರಲು ಆಧುನಿಕ ಉಪಾಯವೊಂದು ಕಣ್ಣ ಮುಂದೆ ಬಂದಿದ್ದು, ವೈರಲ್​ ಕೂಡ ಆಗಿದೆ. “ಆಧುನಿಕ ತಟ್ಟೆ” ಎಂಬ ಪರಿಕಲ್ಪನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. … Continue reading ಊಟ ಮಾಡುವಾಗ ಮೊಬೈಲ್​ ಬಳಸಲು ಕಿರಿಕಿರಿಯೇ? ನಿಮಗಾಗಿ ಬಂದಿದೆ ನೋಡಿ ಆಧುನಿಕ ತಟ್ಟೆ!