ಜಗತ್ತಿನ ಜನಸಂಖ್ಯೆ ಕೆಲವೇ ಗಂಟೆಗಳಲ್ಲಿ 800 ಕೋಟಿ; ಭಾರತ ಎಷ್ಟನೇ ಸ್ಥಾನದಲ್ಲಿ?

ನವದೆಹಲಿ: ಜಗತ್ತಿನ ಜನಸಂಖ್ಯೆ ಇನ್ನು ಕೆಲವೇ ಗಂಟೆಗಳಲ್ಲಿ 800 ಕೋಟಿಯನ್ನು ತಲುಪಲಿದೆ. ಯುನೈಟೆಡ್​ ನೇಷನ್ಸ್​ ಅಂದಾಜಿಸಿರುವ ಪ್ರಕಾರ 2022ರ ನ. 15ಕ್ಕೆ ಜಗತ್ತಿನ ಜನಸಂಖ್ಯೆ 8 ಬಿಲಿಯನ್ ಅಂದರೆ 800 ಕೋಟಿಯನ್ನು ತಲುಪಲಿದೆ. ಮಾತ್ರವಲ್ಲ, ಮುಂದಿನ ಎಷ್ಟು ವರ್ಷಗಳಲ್ಲಿ ಜನಸಂಖ್ಯೆ ಎಷ್ಟನ್ನು ತಲುಪಲಿದೆ ಎಂಬುದನ್ನೂ ಅದು ಅಂದಾಜಿಸಿದೆ. 2030ರ ವೇಳೆಗೆ ಜಗತ್ತಿನ ಜನಸಂಖ್ಯೆ 850 ಕೋಟಿಯನ್ನು ತಲುಪಲಿದೆ. ಅಲ್ಲದೆ 2050ಕ್ಕೆ ಇದು 970 ಕೋಟಿಗೆ ತಲುಪಿ, 2080ರ ಸುಮಾರಿಗೆ 1040 ಕೋಟಿಯನ್ನು ದಾಟಲಿದೆ ಎಂಬ ಅಂದಾಜನ್ನು ಮಾಡಲಾಗಿದೆ. … Continue reading ಜಗತ್ತಿನ ಜನಸಂಖ್ಯೆ ಕೆಲವೇ ಗಂಟೆಗಳಲ್ಲಿ 800 ಕೋಟಿ; ಭಾರತ ಎಷ್ಟನೇ ಸ್ಥಾನದಲ್ಲಿ?