ಅರಬ್​ ರಾಷ್ಟ್ರದಿಂದ ಬಂದ ಹಡಗಿನ ಕಂಟೈನರ್​​ನಲ್ಲಿ ಸಿಕ್ತು ಕೋಟ್ಯಾಂತರ ಬೆಲೆಯ ಹೆರಾಯಿನ್​!: ಅಧಿಕಾರಿಗಳು ಪತ್ತೆ ಹಚ್ಚಿದ್ದು ಹೀಗೆ

ಅಹಮದಾಬಾದ್​: ಗುಜರಾತ್​​ನ ಕಚ್​ ಜಿಲ್ಲೆಯಲ್ಲಿರುವ ಮುಂದ್ರಾ ಬಂದರಿನಲ್ಲಿ ಮಾದಕ ದ್ರವ್ಯ ಕಳ್ಳಸಾಗಾಣಿಕೆಯನ್ನು ಪತ್ತೆ ಹಚ್ಚಿರುವ ಗುಜರಾತ್​ ಭಯೋತ್ಪಾದಕ ನಿಗ್ರಹ ಪಡೆ ಭಾರೀ ಜಾಲವೊಂದನ್ನು ಬೇಧಿಸಿದ್ದಾರೆ. ಹಡಗಿನ ಕಂಟೈನರ್​ನಲ್ಲಿದ್ದ 75.3 ಕೆಜಿ ಹೆರಾಯಿನ್​ ವಶಪಡಿಸಿಕೊಳ್ಳಲಾಗಿದ್ದು, ಇದರ ಬೆಲೆ ಬರೋಬ್ಬರಿ 376.5 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಹಡಗು ಅರಬ್​ ರಾಷ್ಟ್ರದಿಂದ ಬಂದಿದ್ದು, ಪಂಜಾಬ್​​ಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಡಿಜಿಪಿ ಆಶೀಶ್​ ಭಾಟಿಯಾ ತಿಳಿಸಿದ್ದಾರೆ. ಇದರಲ್ಲಿ ಪಶ್ವಿಮ ಬಂಗಾಳದ ಏಜೆಂಟ್​ಗಳು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಶೀಘ್ರದಲ್ಲೇ ಎಲ್ಲರನ್ನು ಬಂಧಿಸಲಾಗುವುದು … Continue reading ಅರಬ್​ ರಾಷ್ಟ್ರದಿಂದ ಬಂದ ಹಡಗಿನ ಕಂಟೈನರ್​​ನಲ್ಲಿ ಸಿಕ್ತು ಕೋಟ್ಯಾಂತರ ಬೆಲೆಯ ಹೆರಾಯಿನ್​!: ಅಧಿಕಾರಿಗಳು ಪತ್ತೆ ಹಚ್ಚಿದ್ದು ಹೀಗೆ