ಪಾರಿವಾಳ ಹಿಡಿಯಲು ಹೋದಾಗ ತಾಗಿದ ಹೈಟೆನ್ಶನ್ ವೈರ್; ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವು

ಬೆಂಗಳೂರು: ವಿಜಯಾನಂದ ನಗರದ ನಂದಿನಿ ಲೇಔಟ್​​ನಲ್ಲಿ ಪಾರಿವಾಗಳನ್ನು ಹಿಡಿಯಲು ಹೋದ ಬಾಲಕರು ತಮ್ಮ ಜೀವಕ್ಕೇ ಅಪಾಯ ತಂದೊಡ್ಡಿದ್ದರು. ಪಾರಿವಾಳ ಹಿಡಿಯಲು ಹೋದಾಗ ವಿದ್ಯುತ್​​ ಹೈಟೆನ್ಶನ್ ವೈರ್ ತಾಗಿ, ಇಬ್ಬರೂ ಜೀವನ್ಮರಣದ ಹೋರಾಟ ನಡೆಸುವಂತಾಗಿತ್ತು. ಇದೀಗ ಬಾಲಕ ಸುಪ್ರೀತ್ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮೂರು ದಿನದಿಂದ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದ ಸುಪ್ರೀತ್​ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಜುನಾಥ್ ಮತ್ತು ಪ್ರೇಮ ದಂಪತಿಯ ಒಬ್ಬನೇ ಮಗನಾಗಿದ್ದ ಸುಪ್ರೀತ್, ಮಹಾಲಕ್ಷ್ಮೀ ಲೇಔಟ್​​ನ ವಿಜಯಾನಂದ‌ನಗರದಲ್ಲಿ ವಾಸವಾಗಿದ್ದ. … Continue reading ಪಾರಿವಾಳ ಹಿಡಿಯಲು ಹೋದಾಗ ತಾಗಿದ ಹೈಟೆನ್ಶನ್ ವೈರ್; ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವು