ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್‌ಗೆ ಕೈಕೊಟ್ಟ ಪಿಸ್ತೂಲ್, ತಪ್ಪಿದ ಪದಕ!

ಟೋಕಿಯೊ: ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಪದಕ ಗೆಲುವಿನ ಫೇವರಿಟ್ ಎನಿಸಿದ್ದ ಯುವ ಶೂಟರ್ ಮನು ಭಾಕರ್‌ಗೆ ಪಿಸ್ತೂಲ್ ಕೈಕೊಡುವುದರೊಂದಿಗೆ ಫೈನಲ್‌ಗೇರುವ ಅವಕಾಶ ತಪ್ಪಿಹೋಯಿತು. ಅರ್ಹತಾ ಸುತ್ತಿನಲ್ಲಿ ಮನು ಭಾಕರ್ ಅವರ ಪಿಸ್ತೂಲ್‌ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಅದನ್ನು ಸರಿಪಡಿಸಿಕೊಳ್ಳಲು ಸುಮಾರು 20 ನಿಮಿಷ ವ್ಯರ್ಥವಾಯಿತು. ಇದರ ನಡುವೆಯೂ ಅಮೋಘ ನಿರ್ವಹಣೆ ತೋರಿದ 19 ವರ್ಷದ ಮನು ಕೊನೆಗೆ 12ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದರಿಂದಾಗಿ ಸ್ಪರ್ಧೆಯ ಮೊದಲ 2 ದಿನಗಳಲ್ಲೂ ಭಾರತೀಯ ಶೂಟರ್‌ಗಳು ಪದಕದ ಖಾತೆ ತೆರೆಯದೆ ನಿರಾಸೆ … Continue reading ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್‌ಗೆ ಕೈಕೊಟ್ಟ ಪಿಸ್ತೂಲ್, ತಪ್ಪಿದ ಪದಕ!