ಹಿಂದು ಧರ್ಮ ಕುರಿತ ವಿಶ್ವಕೋಶದ ಸಂಕಲ್ಪ ಕೈಗೊಂಡಿದ್ದ ಸ್ವಾಮಿ ಹರ್ಷಾನಂದ

ರಾಮಕೃಷ್ಣ ಪರಂಪರೆಯ ಹಿರಿಯ ಸಂನ್ಯಾಸಿಗಳೂ, ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರೂ ಆಗಿದ್ದ ಸ್ವಾಮಿ ಹರ್ಷಾನಂದಜೀ ಇನ್ನಿಲ್ಲ. ಭಾರತೀಯ ಸಂಸ್ಕೃತಿಯನ್ನು ಪ್ರಾಮಾಣಿಕವಾಗಿ ಪರಿಚಯಿಸುವ ಗ್ರಂಥಗಳು ವಿರಳವೇ ಆಗಿದ್ದ ಕಾಲದಲ್ಲಿ ಹಿಂದುಧರ್ಮವನ್ನು ಕುರಿತ ವಿಶ್ವಕೋಶದ ಸಂಕಲ್ಪವನ್ನು ಕೈಗೊಂಡವರು ಅವರು. ಮೊದಲಿಗೆ ಮೂರು ಸಂಪುಟಗಳಲ್ಲಿ, ಸುಮಾರು ಎರಡು ಸಾವಿರ ಪುಟಗಳಲ್ಲಿ ‘ಎ ಕನ್ಸೈಸ್ ಎನ್‌ಸೈಕ್ಲೋಪಿಡಿಯಾ ಆಫ್ ಹಿಂದುಯಿಸಂ’ನ ವಿಶ್ವಕೋಶ ಸಿದ್ಧವಾಯಿತು. ನಂತರ ಅದಕ್ಕೆ ನಾಲ್ಕನೆಯ ಸಂಪುಟ ಪರಿಶಿಷ್ಟವಾಗಿ ಸೇರಿತು. ಈ ನಾಲ್ಕು ಸಂಪುಟಗಳಲ್ಲಿ ಹಿಂದುಧರ್ಮದ ಸುಮಾರು ಸಾವಿರಕ್ಕೂ ಮೀರಿದ ವಿವಿಧ ವಿಷಯಗಳನ್ನು … Continue reading ಹಿಂದು ಧರ್ಮ ಕುರಿತ ವಿಶ್ವಕೋಶದ ಸಂಕಲ್ಪ ಕೈಗೊಂಡಿದ್ದ ಸ್ವಾಮಿ ಹರ್ಷಾನಂದ