ಬರಿಗಣ್ಣಿಗೆ ಗೋಚರಿಸುತ್ತಿದೆ ಸೌರಕಲೆ

ಉಡುಪಿ: ಸೂರ್ಯನ ಮೇಲ್ಮೈಯಲ್ಲಿ ಗುರುತಿಸಲಾಗಿರುವ ‘ಸೌರಕಲೆ-3363’ಯನ್ನು ಯಾವುದೇ ದೂರದರ್ಶಕಗಳ ಸಹಾಯವಿಲ್ಲದೆ ವೀಕ್ಷಿಸಬಹುದಾಗಿದೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್ ತಿಳಿಸಿದ್ದಾರೆ. ಸೌರಕಲೆ ಎಂಬುದು ಸೂರ್ಯನ ಮೇಲ್ಮೈಯಲ್ಲಿರುವ ಒಂದು ಪ್ರದೇಶವಾಗಿದೆ. ಅಲ್ಲಿ ತಾಪಮಾನವು ಸುತ್ತಮುತ್ತಲಿನ ಪ್ರದೇಶಗಳಿಗಿಂತ ಕಡಿಮೆ ಇರುತ್ತದೆ. ಸೂರ್ಯನ ಮೇಲ್ಮೈ 5000 ಡಿಗ್ರಿ ಬಿಸಿಯಾಗಿರುತ್ತದೆ. ಆದರೆ ಈ ಪ್ರದೇಶವು 4500 ಡಿಗ್ರಿಗಳಲ್ಲಿದೆ. ಈ ಭಾಗ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದ ನಡುವೆ 500 ಡಿಗ್ರಿ ತಾಪಮಾನದ ವ್ಯತ್ಯಾಸವಿದೆ. ಹಾಗಾಗಿ ಅದು ಕಪ್ಪಾಗಿ ಕಾಣುತ್ತದೆ. … Continue reading ಬರಿಗಣ್ಣಿಗೆ ಗೋಚರಿಸುತ್ತಿದೆ ಸೌರಕಲೆ