ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್​ ದಾಳಿ; 13 ಮಂದಿ ಮೃತ್ಯು

ಸೊಮಾಲಿಯಾ: ಭದ್ರತಾ ಚೆಕ್​ಪಾಯಿಂಟ್​ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ ಪರಿಣಾಮ 13 ಮಂದಿ ಮೃತಪಟ್ಟು, 45ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇಂದ್ರ ಸೊಮಾಲಿಯಾದಲ್ಲಿ ನಡೆದಿದೆ. ಸೊಮಾಲಿಯಾದ ಹಿರಾನ್ ಪ್ರದೇಶದ ಬೇಲೆಡ್ವೆನ್ ನಗರದಲ್ಲಿ ಘಟನೆ ನಡೆದಿದ್ದು, ಕಟ್ಟಡದ ಅವಶೇಷಗಳಡಿ ಸಿಲುಕಿರುವ ಮೃತದೇಹ ಹಾಗೂ ಗಾಯಾಳುಗಳನ್ನು ರಕ್ಷಣಾ ಇಲಾಖೆಯ ಅಧಿಕಾರಿಗಳು ಹೊರತೆಗೆಯುತ್ತಿದ್ದಾರೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದು, ಇನ್ನಷ್ಟು ಜನರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಬಾಂಬ್​ ಸ್ಪೋಟಕ್ಕೆ ಕಟ್ಟಡಗಳು … Continue reading ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್​ ದಾಳಿ; 13 ಮಂದಿ ಮೃತ್ಯು