ಬೆಳಗಾವಿಯಿಂದ ಹೊರಟ ವಿಮಾನಕ್ಕೆ ಹಕ್ಕಿ ಡಿಕ್ಕಿ; ಇಂಜಿನ್ ಬ್ಲೇಡ್​ಗೆ ಹಾನಿ..

ಬೆಳಗಾವಿ: ರಾಜ್ಯದಲ್ಲಿ ವಿಮಾನವೊಂದಕ್ಕೆ ಹಕ್ಕಿ ಡಿಕ್ಕಿ ಹೊಡೆದು, ವಿಮಾನದ ಇಂಜಿನ್ ಬ್ಲೇಡ್​ಗೆ ಹಾನಿಯಾದ ಪ್ರಕರಣವೊಂದು ವರದಿಯಾಗಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಈ ಪ್ರಕರಣ ನಡೆದಿದ್ದು, ಸ್ಪೈಸ್​ಜೆಟ್​​ನ ವಿಮಾನಕ್ಕೆ ಧಕ್ಕೆಯಾಗಿದೆ. ಬೆಳಗಾವಿಯಿಂದ ದೆಹಲಿಗೆ ಹೊರಟಿದ್ದ ಸ್ಪೈಸ್​ಜೆಟ್​ ಬಿ737 ವಿಮಾನದಲ್ಲಿ ಇಂದು 187 ಪ್ರಯಾಣಿಕರಿದ್ದರು. ಆದರೆ ಇದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ಅದಾಗ್ಯೂ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಆದರೆ ಈ ಡಿಕ್ಕಿಯಿಂದಾಗಿ ವಿಮಾನದ ಇಂಜಿನ್ ಬ್ಲೇಡ್​ಗೆ ಹಾನಿ ಆಗಿ ತಾಂತ್ರಿಕ … Continue reading ಬೆಳಗಾವಿಯಿಂದ ಹೊರಟ ವಿಮಾನಕ್ಕೆ ಹಕ್ಕಿ ಡಿಕ್ಕಿ; ಇಂಜಿನ್ ಬ್ಲೇಡ್​ಗೆ ಹಾನಿ..