ಅಮಲಿನಲ್ಲಿ ಜೀಪಿನ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಯುವಕ -ಯುವತಿಯರಿಗೆ ಶಾಕ್​ ಕೊಟ್ಟ ಪೊಲೀಸರು

ಚಿಕ್ಕಮಗಳೂರು: ಯುವಕ-ಯುವತಿಯರ ಗುಂಪು ಮುಳ್ಳಯನಗಿರಿ ಪ್ರವಾಸಕ್ಕೆಂದು ತಮ್ಮ ಬೊಲೆರೋ ವಾಹನದಲ್ಲಿ ಹೊರಟಿದ್ದರು. ಸುಮ್ಮನೆ ಹೋಗಿದ್ದರೆ ಏನೂ ಆಗುತ್ತಿರಲಿಲ್ಲವೇನೋ.. ಆದರೆ ಇವರು ಮಾಡಿದ ಆವಾಂತರದಿಂದಾಗಿ ಕೈಗೊಂಡಿದ್ದ ಪ್ರವಾಸಕ್ಕೆ ಬ್ರೇಕ್​ ಬಿದ್ದಿದೆ. ಅಂದಹಾಗೆ ಕಾನೂನು ನಿಯಮ ಉಲ್ಲಂಘಿಸಿ ಪ್ರಯಾಣ ಮಾಡಿ ಪ್ರವಾಸಕ್ಕೆ ಬಂದವರು ಈಗ ಪೊಲೀಸ್​ ಠಾಣೆ ಮೆಟ್ಟಿಲೇರುವಂತಾಗಿದೆ.  ಪ್ರವಾಸದ ಗುಂಗಿನಲ್ಲಿದ್ದ ಇವರಿಗೆ ಚಿಕ್ಕಮಗಳೂರು ಪೊಲೀಸರು ಶಾಕ್​ ನೀಡಿದ್ದು, ಅಮಲು ಪದಾರ್ಥ ಸೇವಿಸಿ ಪ್ರಯಾಣಿಸುತ್ತಿದ್ದರ ವಿರುದ್ಧ ಪ್ರಕರಣ ದಾಖಲಿಸಿದ್ದಲ್ಲದೇ ವಿಚಾರಣೆ ಕೈಗೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಬೊಲೆರೋ ವಾಹನದ ಮೇಲೆ ಕುಳಿತು, ಅಮಲಿನಲ್ಲಿ … Continue reading ಅಮಲಿನಲ್ಲಿ ಜೀಪಿನ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಯುವಕ -ಯುವತಿಯರಿಗೆ ಶಾಕ್​ ಕೊಟ್ಟ ಪೊಲೀಸರು