ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ, ಐಪಿಎಲ್‌ನಿಂದ ಶ್ರೇಯಸ್ ಅಯ್ಯರ್ ಔಟ್

ಪುಣೆ: ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಉಳಿದೆರಡು ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಬಿದ್ದು ಎಡಭುಜದ ಕೀಲು ತಪ್ಪಿರುವುದರಿಂದ ಶ್ರೇಯಸ್ ಅಯ್ಯರ್ ಮುಂಬರುವ ಐಪಿಎಲ್ 14ನೇ ಆವೃತ್ತಿಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಂಪೂರ್ಣವಾಗಿ ಅಲಭ್ಯರಾಗಲಿದ್ದಾರೆ. ಇಂಗ್ಲೆಂಡ್ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಜಾನಿ ಬೇರ್‌ಸ್ಟೋ ಬಾರಿಸಿದ ಚೆಂಡನ್ನು ತಡೆಯಲು ಡೈವ್ ಹೊಡೆದ ವೇಳೆ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಆಗಲೇ … Continue reading ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ, ಐಪಿಎಲ್‌ನಿಂದ ಶ್ರೇಯಸ್ ಅಯ್ಯರ್ ಔಟ್