ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಯುಗ ಇಂದು ಮುಕ್ತಾಯ

ದುಬೈ: ಭಾರತ ತಂಡ ಸೋಮವಾರ ನಮೀಬಿಯ ವಿರುದ್ಧ ಔಪಚಾರಿಕ ಪಂದ್ಯ ಆಡುವ ಮೂಲಕ ಟಿ20 ವಿಶ್ವಕಪ್ ಅಭ್ಯಾನ ಕೊನೆಗೊಳಿಸಲಿದೆ. ಇದೇ ವೇಳೆ ಕಳೆದ ಕೆಲ ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಏಳು-ಬೀಳುಗಳನ್ನು ಕಂಡಿರುವ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಜೋಡಿಯ ಯುಗವೂ ಮುಕ್ತಾಯ ಕಾಣಲಿದೆ. ಹಾಲಿ ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಈಗಾಗಲೆ ಘೋಷಿಸಿರುವುದರಿಂದ ನಮೀಬಿಯ ವಿರುದ್ಧದ ಪಂದ್ಯ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಕೊನೇ ಚುಟುಕು ಕ್ರಿಕೆಟ್ ಪಂದ್ಯವಾಗಿರಲಿದೆ. … Continue reading ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಯುಗ ಇಂದು ಮುಕ್ತಾಯ