ಧಾರಾವಾಹಿಗಳು ಮುಂದುವರಿಯಲಿವೆ; ತಿಂಗಳಿಂದ ನಿಂತಿದ್ದ ಚಿತ್ರೀಕರಣ ಮತ್ತೆ ಶುರು

ಬೆಂಗಳೂರು: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಕನ್ನಡ ಸೀರಿಯಲ್​ಗಳ ಚಿತ್ರೀಕರಣವೀಗ ಮತ್ತೆ ಆರಂಭವಾಗಿದೆ. ಬಂದ್ ಆಗಿದ್ದ ಕ್ಯಾಮರಾ ಮತ್ತೆ ಆನ್ ಆಗಿದೆ. ಹಾಗಾಗಿ, ನಿಧಾನಗತಿಯಲ್ಲಿ ಸಾಗುತ್ತಿದ್ದ ಸಂಚಿಕೆಗಳು ಇನ್ನೇನು ಸೋಮವಾರದಿಂದ ಮುಂಚಿನ ವೇಗ ಪಡೆದುಕೊಳ್ಳಲಿವೆ! ಕರ್ನಾಟಕದಲ್ಲಿ ಲಾಕ್​ಡೌನ್ ಜಾರಿಯಲ್ಲಿರುವಾಗ ಶೂಟಿಂಗ್ ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲೂ ಇರಬಹುದು. ಕರ್ನಾಟಕದಲ್ಲಿ ಅನುಮತಿ ಇಲ್ಲದಿದ್ದರೂ, ಪಕ್ಕದ ಹೈದರಾಬಾದ್​ನಲ್ಲಿ ಚಿತ್ರೀಕರಣಕ್ಕೆ ಅನುಮತಿ ಇರುವುದರಿಂದ ಕನ್ನಡದ ಮನರಂಜನಾ ವಾಹಿನಿಗಳ ಕೆಲವು ಜನಪ್ರಿಯ ಧಾರಾವಾಹಿಗಳ ತಂಡಗಳು ಹೈದರಾಬಾದ್​ನಲ್ಲಿ ಬಿಡಾರ ಹೂಡಿವೆ. … Continue reading ಧಾರಾವಾಹಿಗಳು ಮುಂದುವರಿಯಲಿವೆ; ತಿಂಗಳಿಂದ ನಿಂತಿದ್ದ ಚಿತ್ರೀಕರಣ ಮತ್ತೆ ಶುರು