ಹೊಸ ತಲೆಮಾರಿನ 400 ವಂದೇ ಭಾರತ್ ರೈಲುಗಳ ಸಂಚಾರ: ನಿರ್ಮಲಾ ಸೀತಾರಾಮನ್‌

ನವದೆಹಲಿ: ಕಳೆದ ವರ್ಷ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿಯವರು ಭಾರತದ 75 ನಗರಗಳನ್ನು ಸಂಪರ್ಕಿಸಲು ಹೊಸ ವಂದೇ ಭಾರತ್ ರೈಲುಗಳನ್ನು ಓಡಿಸುವುದಾಗಿ ಘೋಷಿಸಿದ್ದರು. ಅದರಂತೆಯೇ ಈ ಬಾರಿಯ ಬಜೆಟ್‌ನಲ್ಲಿ 400 ವಂದೇ ಭಾರತ್‌ ರೈಲುಗಳನ್ನು ಘೋಷಿಸಲಾಗಿದೆ. ವಂದೇ ಭಾರತ್ ರೈಲುಗಳನ್ನು ಶತಾಬ್ದಿಯನ್ನು ಹೊರತುಪಡಿಸಿ ಅನೇಕ ಪ್ರಮುಖ ಮಾರ್ಗಗಳಲ್ಲಿ ಇಂಟರ್‌ಸಿಟಿ ರೈಲುಗಳಂತೆ ಪ್ರಾರಂಭಿಸಲಾಗುವುದು. ಇವು ಜರ್ಮನ್ ವಿನ್ಯಾಸದ ಕೋಚ್‌ಗಳಾಗಿರುತ್ತವೆ. ದೇಶದಲ್ಲಿ ಒಟ್ಟು 400 ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗಲಿದೆ. ಸಮಯಪಾಲನೆ ಮತ್ತು ಪ್ರಯಾಣಿಕರಿಗೆ … Continue reading ಹೊಸ ತಲೆಮಾರಿನ 400 ವಂದೇ ಭಾರತ್ ರೈಲುಗಳ ಸಂಚಾರ: ನಿರ್ಮಲಾ ಸೀತಾರಾಮನ್‌