ರಣಜಿ ಟ್ರೋಫಿ ಪರಿಷ್ಕೃತ ವೇಳಾಪಟ್ಟಿ ಸಿದ್ಧ, ಸ್ವರೂಪವನ್ನೂ ಬದಲಾಯಿಸಿದ ಬಿಸಿಸಿಐ

ನವದೆಹಲಿ: ಕರೊನಾ ಹಾವಳಿಯಿಂದಾಗಿ ಮುಂದೂಡಲ್ಪಟ್ಟಿದ್ದ 2021-22ರ ಸಾಲಿನ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಫೆಬ್ರವರಿ 6ರಿಂದ ಮಾರ್ಚ್ 5ರವರೆಗೆ ನಡೆಯಲಿವೆ. ಪರಿಷ್ಕೃತ ವೇಳಾಪಟ್ಟಿಯ ಅನ್ವಯ 38 ತಂಡಗಳ ಟೂರ್ನಿಯ ಲೀಗ್ ಹಂತದ ಪಂದ್ಯಗಳು 9 ತಾಣಗಳಾದ ಅಹಮದಾಬಾದ್, ಕೋಲ್ಕತ, ತಿರುವನಂತಪುರ, ಕಟಕ್, ಚೆನ್ನೈ, ಗುವಾಹಟಿ, ಹೈದರಾಬಾದ್, ಬರೋಡ ಮತ್ತು ರಾಜ್‌ಕೋಟ್‌ನಲ್ಲಿ ನಡೆಯುವ ನಿರೀಕ್ಷೆಗಳಿವೆ. ನಾಕೌಟ್ ಪಂದ್ಯಗಳು ಜೂನ್‌ನಲ್ಲಿ ನಡೆಯಲಿವೆ. ಈ ಮೊದಲಿನ ವೇಳಾಪಟ್ಟಿ ಪ್ರಕಾರ ರಣಜಿ ಟ್ರೋಫಿ ಜನವರಿ 13ರಂದು ಆರಂಭಗೊಳ್ಳಬೇಕಿತ್ತು. … Continue reading ರಣಜಿ ಟ್ರೋಫಿ ಪರಿಷ್ಕೃತ ವೇಳಾಪಟ್ಟಿ ಸಿದ್ಧ, ಸ್ವರೂಪವನ್ನೂ ಬದಲಾಯಿಸಿದ ಬಿಸಿಸಿಐ