ಯುರೋಪ್​ನ ಅತಿ ದೊಡ್ಡ ಅಣು ಸ್ಥಾವರ ಝಪೊರಿಝಿಯಾ ಮೇಲೆ ರಷ್ಯಾ ದಾಳಿ: ವಿಶ್ವಸಂಸ್ಥೆಯಿಂದ ತುರ್ತು ಸಭೆ

ಕೀಯೆವ್​/ಮಾಸ್ಕೋ: ಯೂಕ್ರೇನ್​ ಮೇಲೆ ತೀವ್ರ ದಾಳಿಯನ್ನು ಮುಂದುವರಿಸಿರುವ ರಷ್ಯಾ, ಯೂಕ್ರೇನ್​ನಲ್ಲಿರುವ ಯುರೋಪ್​ನ ಅತಿ ದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಝಪೊರಿಝಿಯಾ ಮೇಲೆ ಶೆಲ್​ ದಾಳಿ ನಡೆಸಿರುವುದಾಗಿ ಹತ್ತಿರದ ಪಟ್ಟಣದ ಮೇಯರ್ ಒಬ್ಬರು ತಿಳಿಸಿದ್ದಾರೆ. ರಷ್ಯಾ ಪಡೆಗಳು ಗುಂಡಿನ ದಾಳಿ ಮುಂದುವರಿಸಿರುವುದರಿಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಸಾಧ್ಯವಾಗಿಲ್ಲ. ರಷ್ಯಾದ ಈ ನಡೆ ತುಂಬಾ ವಿನಾಶಕಾರಿಯಾಗಿದ್ದು, ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಅಣು ಸ್ಥಾವರದ ಮೇಲೆ ದಾಳಿಯಾಗಿದ್ದರೂ ಸ್ಥಳದಲ್ಲಿ ವಿಕಿರಣ ಭದ್ರತೆಯನ್ನು ಖಾತರಿಪಡಿಸಲಾಗಿದೆ ಎಂದು ಅಣು ಸ್ಥಾವರದ … Continue reading ಯುರೋಪ್​ನ ಅತಿ ದೊಡ್ಡ ಅಣು ಸ್ಥಾವರ ಝಪೊರಿಝಿಯಾ ಮೇಲೆ ರಷ್ಯಾ ದಾಳಿ: ವಿಶ್ವಸಂಸ್ಥೆಯಿಂದ ತುರ್ತು ಸಭೆ