ಉತ್ತರಾಖಂಡದ ಆರೋಗ್ಯ ಸಚಿವರ ಕಾರು ಅಪಘಾತ: ಪಲ್ಟಿಯಾಗಿ ಇನ್ನೊಂದು ಕಾರಿಗೆ ಡಿಕ್ಕಿ

ಡೆಹ್ರಾಡೂನ್​: ಉತ್ತರಾಖಂಡದ ಆರೋಗ್ಯ ಸಚಿವ ಧಾನ್​ ಸಿಂಗ್​ ರಾವತ್​ ಅವರಿದ್ದ ಕಾರು ಮಂಗಳವಾರ ಸಂಜೆ ಅಪಘಾತಕ್ಕೀಡಾಗಿದೆ. ರಾವತ್​ ಅವರು ತಮ್ಮ ಸಿಬ್ಬಂದಿಯೊಂದಿಗೆ ತಲಿಸ್ಮಾನ್​ ಪಟ್ಟಣದಿಂದ ಡೆಹ್ರಾಡೂನ್​​ಗೆ ಮರಳುವಾಗ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೋಟೋದಲ್ಲಿ ಸಚಿವರು ಕಾರು ಉರುಳಿಬಿದ್ದು ಪಕ್ಕದಲ್ಲಿ ಪಾರ್ಕ್​ ಮಾಡಿರುವ ಕಾರಿಗೆ ಗುದ್ದಿ ಒರಗಿಕೊಂಡು ನಿಂತಿರುವ ದೃಶ್ಯವನ್ನು ಕಾಣಬಹುದು. ಘಟನೆಯಲ್ಲಿ ಸಚಿವರು ಸಣ್ಣಪುಟ್ಟ ಗಾಯಗಳಿಂದ ಬಚಾವ್​ ಆಗಿದ್ದಾರೆ. ಸದ್ಯ ಅವರನ್ನು ಚಿಕಿತ್ಸೆಗಾಗಿ ಪ್ಯಾಬೊ ಆಸ್ಪತ್ರೆಗೆ … Continue reading ಉತ್ತರಾಖಂಡದ ಆರೋಗ್ಯ ಸಚಿವರ ಕಾರು ಅಪಘಾತ: ಪಲ್ಟಿಯಾಗಿ ಇನ್ನೊಂದು ಕಾರಿಗೆ ಡಿಕ್ಕಿ