ಚೀನಾದಲ್ಲಿ ಪತ್ತೆಯಾದ ದೈತ್ಯ ಸಿಂಕ್​ಹೋಲ್​ ಕೆಳಗೆ ದಟ್ಟಾರಣ್ಯ! ಹಿಂದೆಂದೂ ಕಂಡಿರದ ಜೀವರಾಶಿಗಳಿರೋ ಸಾಧ್ಯತೆ

ಬೀಜಿಂಗ್​: ಇಡೀ ಜಗತ್ತು ವಿಸ್ಮಯಗಳ ಆಗರ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಭೂಮಿಯ ಮೇಲೆ ಮನುಷ್ಯ ಸಂಶೋಧನೆ ಮಾಡಿರುವುದು ಕೆಲವೊಂದಿಷ್ಟು ಮಾತ್ರ, ಈ ನಿಗೂಢ ಜಗತ್ತಿನಲ್ಲಿ ಯಾರ ಕೈಗೂ ಎಟುಕದ ವಿಸ್ಮಯಗಳು ಇನ್ನು ಸಾಕಷ್ಟಿವೆ. ಆಗಾಗ ವಿಸ್ಮಯಗಳು ಜಗತ್ತಿಗೆ ತೆರೆದುಕೊಳ್ಳುವ ಮೂಲಕ ಜನರ ಹುಬ್ಬೇರಿಸುತ್ತಿದೆ. ಇದೀಗ ಮತ್ತೊಂದು ವಿಸ್ಮಯ ಚೀನಾದಲ್ಲಿ ನಡೆದಿದೆ. ದಕ್ಷಿಣ ಚೀನಾದ ಸ್ವಾಯತ್ತ ಪ್ರದೇಶ ಗುವಾಂಗ್ಕ್ಸಿ ಝುವಾಂಗ್​ನಲ್ಲಿ ದೈತ್ಯಾಕಾರದ ಬತ್ತುಕುಳಿ (ಸಿಂಕ್​ಹೋಲ್​) ಪತ್ತೆಯಾಗಿದೆ. ಇದಿಷ್ಟೇ ಆಗಿದ್ದರೆ ಅಚ್ಚರಿಯೇನಿರುತ್ತಿರಲಿಲ್ಲ. ಏಕೆಂದರೆ, ಬೃಹತ್​ ಬತ್ತುಕುಳಿ ಹಿಂದಿನಿಂದಲೂ ಪತ್ತೆಯಾಗುತ್ತಿವೆ. … Continue reading ಚೀನಾದಲ್ಲಿ ಪತ್ತೆಯಾದ ದೈತ್ಯ ಸಿಂಕ್​ಹೋಲ್​ ಕೆಳಗೆ ದಟ್ಟಾರಣ್ಯ! ಹಿಂದೆಂದೂ ಕಂಡಿರದ ಜೀವರಾಶಿಗಳಿರೋ ಸಾಧ್ಯತೆ