ಹುಣಸೂರಿನಲ್ಲಿ ಮನಕಲಕುವ ಘಟನೆ: ಐದು ರೂಪಾಯಿ ನಾಣ್ಯ ನುಂಗಿ ಮಗು ಸಾವು

ಮೈಸೂರು: ಮಕ್ಕಳು ಮನೆಯಲ್ಲಿರಲಿ ಅಥವಾ ಹೊರಗಡೆ ಆಟವಾಡುತ್ತಿರಲಿ ಪಾಲಕರು ತುಂಬಾ ಜಾಗ್ರತೆ ವಹಿಸಬೇಕು. ಇಲ್ಲವಾದಲ್ಲಿ ಅನಾಹುತಗಳಿಗೆ ಎಡೆಮಾಡಿಕೊಡಬೇಕಾಗುತ್ತದೆ ಎಂಬುದಕ್ಕೆ ಈ ದುರಂತ ಘಟನೆ ತಾಜಾ ಉದಾಹರಣೆ ಆಗಿದೆ. ನಾಲ್ಕು ವರ್ಷದ ಹೆಣ್ಣು ಮಗವೊಂದು ಐದು ರೂಪಾಯಿ ನಾಣ್ಯವನ್ನು ನುಂಗಿ ಮೃತಪಟ್ಟಿರುವ ಘಟನೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಆಯರಹಳ್ಳಿ ಗ್ರಾಮದಲ್ಲಿ ನಡೆದಿದೆ. ಖುಷಿ ಮೃತ ದುರ್ದೈವಿ. ಮಗು ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿತ್ತು. ಶುಕ್ರವಾರ ನಾಣ್ಯದೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಾಣ್ಯವನ್ನು ಮಗು ನುಂಗಿದೆ. ತಕ್ಷಣ ಮಗುವನ್ನು ಮೊದಲು ಸ್ಥಳೀಯ … Continue reading ಹುಣಸೂರಿನಲ್ಲಿ ಮನಕಲಕುವ ಘಟನೆ: ಐದು ರೂಪಾಯಿ ನಾಣ್ಯ ನುಂಗಿ ಮಗು ಸಾವು