VIDEO| ಕ್ವಾರಂಟೈನ್ ಕೊಠಡಿಯಲ್ಲಿ ಇಲಿ ಕಾಟ! ಟೆನಿಸ್ ಆಟಗಾರ್ತಿಯ ಅಳಲು

ಮೆಲ್ಬೋರ್ನ್: ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೂರ್ನಿಗೆ ಪೂರ್ವಭಾವಿಯಾಗಿ ಇದೀಗ ಎಲ್ಲ ಟೆನಿಸ್ ತಾರೆಯರು ಆತಿಥೇಯ ಆಸ್ಟ್ರೇಲಿಯಾದಲ್ಲಿ ಒಟ್ಟುಗೂಡಿದ್ದು, ಕೋವಿಡ್-19 ಪರೀಕ್ಷೆಯ ಬಳಿಕ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಲಾಸ್ ಏಂಜಲಿಸ್‌ನಿಂದಾಗಿ ಟೂರ್ನಿಗಾಗಿ ಆಟಗಾರರನ್ನು ಕರೆತಂದ ಬಾಡಿಗೆ ವಿಮಾನದಲ್ಲಿದ್ದ ನಾಲ್ವರಿಗೆ ಪಾಸಿಟಿವ್ ಬಂದಿದೆ. ಇದರಿಂದಾಗಿ 47 ಆಟಗಾರರನ್ನು ಕಟ್ಟುನಿಟ್ಟಿನ ಕ್ವಾರಂಟೈನ್‌ನಲ್ಲಿಡಲಾಗಿದೆ. ಈ ನಡುವೆ ಮೆಲ್ಬೋರ್ನ್‌ನ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ವೇಳೆ ಕಜಾಕ್‌ಸ್ತಾನದ ಆಟಗಾರ್ತಿ ಯೂಲಿಯಾ ಪುಟಿನ್‌ಸೇವಾಗೆ ‘ರೂಮ್‌ಮೇಟ್’ ಕೂಡ ದೊರೆತಿದ್ದು, ಇದರಿಂದ ಅವರು ಐಸೋಲೇಷನ್‌ನಲ್ಲೂ ಭೀತಿಯಿಂದಲೇ ದಿನಗಳನ್ನು ಕಳೆಯುವಂತಾಗಿದೆ. … Continue reading VIDEO| ಕ್ವಾರಂಟೈನ್ ಕೊಠಡಿಯಲ್ಲಿ ಇಲಿ ಕಾಟ! ಟೆನಿಸ್ ಆಟಗಾರ್ತಿಯ ಅಳಲು