ಮತ್ತೊಂದು ಕಟೌಟ್​​ ಜಾತ್ರೆಗೆ ಅಭಿಮಾನಿಗಳು ಸಜ್ಜು: 75 ಕಟೌಟ್​ಗಳಲ್ಲಿ ಪುನೀತ್ ದರ್ಶನ..

ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಜನ್ಮದಿನ ಸಂದರ್ಭದಲ್ಲಿ ಸೆ. 18ರಂದು ಅಭಿಮಾನ್ ಸ್ಟುಡಿಯೊದಲ್ಲಿ ಅಭಿಮಾನಿಗಳು ವಿಷ್ಣುವರ್ಧನ್ ಅಭಿನಯದ ಸಿನಿಮಾಗಳ ಕಟೌಟ್​ಗಳನ್ನು ನಿಲ್ಲಿಸಿ ಅಭಿಮಾನ ಮೆರೆದಿದ್ದರು. ಇದೀಗ ಅಂಥದ್ದೇ ಒಂದು ಕಟೌಟ್​ ಜಾತ್ರೆಗೆ, ಅಭಿಮಾನದ ಅಭಿವ್ಯಕ್ತಿಗೆ ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳು ಮುಂದಾಗಿದ್ದಾರೆ. ಕರ್ನಾಟಕದ ಪ್ರವಾಸಿ ಹಾಗೂ ಪ್ರೇಕ್ಷಣೀಯ ಸ್ಥಳಗಳ ಅನಾವರಣಗೊಳಿಸುವಂಥ ಸಾಕ್ಷ್ಯಚಿತ್ರ, ಪುನೀತ್ ರಾಜಕುಮಾರ್ ಅವರ ಮಹತ್ವಾಕಾಂಕ್ಷೆಯ ‘ಗಂಧದಗುಡಿ’ ಅ. 28ರಂದು ಬಿಡುಗಡೆ ಆಗಲಿರುವುದರಿಂದ ಹಾಗೂ ನ. 1ರಂದು ಕರ್ನಾಟಕ ಸರ್ಕಾರ ಅಪ್ಪುಗೆ ಘೋಷಿಸಿದ್ದ ಕರ್ನಾಟಕ ರತ್ನ ಪ್ರಶಸ್ತಿ … Continue reading ಮತ್ತೊಂದು ಕಟೌಟ್​​ ಜಾತ್ರೆಗೆ ಅಭಿಮಾನಿಗಳು ಸಜ್ಜು: 75 ಕಟೌಟ್​ಗಳಲ್ಲಿ ಪುನೀತ್ ದರ್ಶನ..