ಜುಲೈ-ಅಕ್ಟೋಬರ್‌ನಲ್ಲಿ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ

ನವದೆಹಲಿ: ಕರೊನಾ ಕಾಲದಲ್ಲಿ ಮೊದಲ ಪ್ರೊ ಕಬಡ್ಡಿ ಲೀಗ್ ಆಯೋಜಿಸಲು ಸಿದ್ಧತೆಗಳು ಶುರುವಾಗಿವೆ. ಜುಲೈ-ಅಕ್ಟೋಬರ್ ಅವಧಿಯಲ್ಲಿ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ ಆಯೋಜಿಸಲು ರೂಪುರೇಷೆ ಸಿದ್ಧಪಡಿಸಲಾಗಿದ್ದು, ಏಪ್ರಿಲ್‌ನಲ್ಲಿ ಟೂರ್ನಿಯ ಟಿವಿ ಪ್ರಸಾರ ಹಕ್ಕಿನ ಹರಾಜು ನಡೆಯಲಿದೆ. ಟೂರ್ನಿಯ ಸಂಘಟಕ ಸಂಸ್ಥೆ ಮಾರ್ಷಲ್ ಸ್ಪೋರ್ಟ್ಸ್‌ನ ಸಿಇಒ ಮತ್ತು ಪ್ರೊ ಕಬಡ್ಡಿ ಲೀಗ್ ಆಯುಕ್ತ ಅನುಪಮ್ ಗೋಸ್ವಾಮಿ ಅವರೇ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕರೊನಾ ಹಾವಳಿಯಿಂದಾಗಿ 2020ರಲ್ಲಿ ಪ್ರೊ ಕಬಡ್ಡಿ ಲೀಗ್ ನಡೆದಿರಲಿಲ್ಲ. ಕರೊನಾ ಮಾರ್ಗಸೂಚಿಗಳ ಅನ್ವಯವೇ ಈ … Continue reading ಜುಲೈ-ಅಕ್ಟೋಬರ್‌ನಲ್ಲಿ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ