ಡಿಸೆಂಬರ್ 22ರಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಲೀಗ್

ಬೆಂಗಳೂರು: ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ ಡಿಸೆಂಬರ್ 22ರಂದು ಆರಂಭಗೊಳ್ಳಲಿದ್ದು, ಟೂರ್ನಿಯ ಎಲ್ಲ ಪಂದ್ಯಗಳು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ ಎನ್ನಲಾಗಿದೆ. ಕಂಠೀರವ ಕ್ರೀಡಾಂಗಣ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡದ ತವರು ಮೈದಾನವಾಗಿದ್ದು, ಜೈಪುರ ಮತ್ತು ಅಹಮದಾಬಾದ್ ಕ್ರೀಡಾಂಗಣಗಳೂ ಟೂರ್ನಿ ಆತಿಥ್ಯದ ರೇಸ್‌ನಲ್ಲಿದ್ದವು. ಆದರೆ ಇದೀಗ ಬೆಂಗಳೂರಿನಲ್ಲೇ ಬಯೋಬಬಲ್ ನಿರ್ಮಿಸಿ ಟೂರ್ನಿ ಆಯೋಜಿಸಲಾಗುತ್ತಿದೆ ಎನ್ನಲಾಗಿದೆ. ಕರೊನಾ ಕಾಲದಲ್ಲಿ ಇದು ದೇಶದ ಮೊದಲ ಪ್ರಮುಖ ಒಳಾಂಗಣ ಕ್ರೀಡಾಕೂಟವಾಗಿರಲಿದೆ. ಕರೊನಾ ಭೀತಿಯಿಂದಾಗಿ 2020ರಲ್ಲಿ ಪ್ರೊ ಕಬಡ್ಡಿ … Continue reading ಡಿಸೆಂಬರ್ 22ರಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಲೀಗ್