ಕಲ್ಲಿದ್ದಲು ಕೊರತೆಯಿಂದ 657 ಪ್ಯಾಸೆಂಜರ್ ರೈಲು ರದ್ದು, ಹಲವೆಡೆ ವಿಳಂಬ: ರೈಲ್ವೆ ಇಲಾಖೆ

ನವದೆಹಲಿ: ದೇಶದಲ್ಲಿ ಕಲ್ಲಿದ್ದಲು ಕೊರತೆ ಕಾಡಿದ್ದು, ವಿದ್ಯುತ್​ ಸಮಸ್ಯೆ ಜತೆಗೆ ಇದೀಗ ರೈಲ್ವೆ ವಲಯದ ಮೇಲೂ ಭಾರೀ ಪರಿಣಾಮ ಬೀರಿದೆ. ಕಲ್ಲಿದ್ದಲು ಬಿಕ್ಕಟ್ಟು ಹಿನ್ನಲೆಯಲ್ಲಿ ರಾಷ್ಟ್ರದ ಹಲವೆಡೆ ಪ್ಯಾಸೆಂಜರ್​ ರೈಲು ಸೇವೆಯನ್ನು ರದ್ದುಗೊಳಿಸಿದೆ. ದೇಶಕ್ಕೆ ಶೇ.70ರಷ್ಟು ವಿದ್ಯುತ್​ ಕಲ್ಲಿದ್ದಲಿನಿಂದ ಪೂರೈಕೆಯಾಗುತ್ತಿದೆ. ಇದೀಗ ಕಲ್ಲಿದ್ದಲು ಕೊರತೆಯಿಂದಾಗಿ ಭಾರೀ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಕೈಗಾರಿಕಾ ವಲಯ ಸಾಕಷ್ಟು ಸಮಸ್ಯೆ ಎದುರಿಸಲಿದ್ದು, ಇದು ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಉಕ್ರೇನ್​-ರಷ್ಯಾ ಆಕ್ರಮಣದಿಂದಾಗಿ ಬೆಲೆ ನಿಯಂತ್ರಣಕ್ಕೆ … Continue reading ಕಲ್ಲಿದ್ದಲು ಕೊರತೆಯಿಂದ 657 ಪ್ಯಾಸೆಂಜರ್ ರೈಲು ರದ್ದು, ಹಲವೆಡೆ ವಿಳಂಬ: ರೈಲ್ವೆ ಇಲಾಖೆ