ಶೂಟಿಂಗ್​ನಲ್ಲಿ ಮತ್ತೊಂದು ಪದಕ ಗೆದ್ದ ಅವನಿ ಲೇಖಾರ!

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಈ ಮುನ್ನ ಶೂಟಿಂಗ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅವನಿ ಲೇಖಾರ ಅವರು ಇದೀಗ ಮತ್ತೊಂದು ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ತನ್ಮೂಲಕ ಪ್ಯಾರಾ ಗೇಮ್ಸ್​​ನಲ್ಲಿ ಅವಳಿ ಪದಕಗಳಿಗೆ ಕೊರಳೊಡ್ಡಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ಮನ್ನಣೆ ಗಳಿಸಿದ್ದಾರೆ. ಇಂದು ನಡೆದ ಮಹಿಳೆಯರ 50 ಮೀಟರ್​ ರೈಫಲ್​ 3ಪಿ ಎಸ್​​ಎಚ್​1 ಫೈನಲ್​ ಸ್ಪರ್ಧೆಯಲ್ಲಿ ಜೈಪುರದ 19 ವರ್ಷ ವಯಸ್ಸಿನ ಅವನಿ, ಕಂಚಿನ ಪದಕ ಗೆದ್ದರು. ರಜತ ಪದಕಕ್ಕಾಗಿ ಆಡಿದಾಗ, ಚೀನಾದ ಜಾಂಗ್​ 10.3 ಅಂಕ ಗಳಿಸಿದರೆ, ಅವನಿ, … Continue reading ಶೂಟಿಂಗ್​ನಲ್ಲಿ ಮತ್ತೊಂದು ಪದಕ ಗೆದ್ದ ಅವನಿ ಲೇಖಾರ!