ಹೊಲದಲ್ಲಿ ದಿಢೀರ್​ ಪ್ರತ್ಯಕ್ಷವಾದ ‘ಐ ಲವ್​​ ಪಾಕಿಸ್ತಾನ್​’ ಎಂಬ ಬಲೂನು, ಪಾಕಿಸ್ತಾನಿ ಧ್ವಜ!

ಚಂಡೀಗಡ: ಭಾರತವು ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪಂಜಾಬಿನ ಹೊಲವೊಂದರಲ್ಲಿ ಪಾಕಿಸ್ತಾನದ ಬಾವುಟಗಳು ಮತ್ತು ಐ ಲವ್​ ಪಾಕಿಸ್ತಾನ್​ ಎಂಬ ಬರಹ-ಚಿತ್ರಗಳುಳ್ಳ ಬಲೂನುಗಳು ಸಿಕ್ಕಿವೆ. ಇಂದು ಮಧ್ಯಾಹ್ನ ದಿಢೀರನೇ ಪ್ರತ್ಯಕ್ಷವಾದ ಈ ಬಲೂನುಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪಂಜಾಬಿನ ರೂಪನಗರ ಜಿಲ್ಲೆಯ ಸಾಂಡೋಯ ಗ್ರಾಮದಲ್ಲಿ ಈ ಪ್ರಸಂಗ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. “ಬಲೂನುಗಳು ಹತ್ತಿರದ ಜಾಗದಿಂದ ಹಾರಿಕೊಂಡು ಬಂದಿರುವ ಹಾಗಿದೆ. ಎಲ್ಲಾ ಆ್ಯಂಗಲ್​ಗಳಲ್ಲೂ ತನಿಖೆ ನಡೆಸುತ್ತಿದ್ದೇವೆ” ಎಂದು … Continue reading ಹೊಲದಲ್ಲಿ ದಿಢೀರ್​ ಪ್ರತ್ಯಕ್ಷವಾದ ‘ಐ ಲವ್​​ ಪಾಕಿಸ್ತಾನ್​’ ಎಂಬ ಬಲೂನು, ಪಾಕಿಸ್ತಾನಿ ಧ್ವಜ!