ಪಾಲ್ಗಾರ್​ನಲ್ಲಿ ನಡೆದ ಸಾಧುಗಳ ಗುಂಪು ಹತ್ಯೆ: ಬಂಧಿತರಾದ 101 ಜನರಲ್ಲಿ ಒಬ್ಬೇ ಒಬ್ಬ ಬೇರೆ ಧರ್ಮದವನೂ ಇಲ್ಲ ಎಂದ ಮಹಾ ಗೃಹಸಚಿವ

ಮುಂಬೈ: ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ಗಡ್ಚಿಂಚಾಲೆಯಲ್ಲಿ ಇತ್ತೀಚೆಗೆ ಪೊಲೀಸರ ಎದುರಲ್ಲೇ ಇಬ್ಬರು ಸಾಧುಗಳು ಸೇರಿ ಮೂವರನ್ನು ಗ್ರಾಮಸ್ಥರು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದರು. ಅವರನ್ನು ಮಕ್ಕಳ ಕಳ್ಳರೆಂದು ಭಾವಿಸಿದ ಜನರು ಈ ದುಷ್ಕೃತ್ಯ ನಡೆಸಿದ್ದರು. ದುರ್ಘಟನೆಯ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೆನ್ನಲ್ಲೇ ದೇಶದೆಲ್ಲೆಡೆಯಿಂದ ಖಂಡನೆ ವ್ಯಕ್ತವಾಗಿತ್ತು. ಘಟನೆಗೆ ಸಂಬಂಧಪಟ್ಟಂತೆ ವರದಿ ನೀಡುವಂತೆ ಕೇಂದ್ರ ಸರ್ಕಾರ ಮಹಾರಾಷ್ಟ್ರ ಸರ್ಕಾರವನ್ನು ಕೇಳಿತ್ತು. ಇದೀಗ ಈ ದೊಂಬಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಮಾರು 101 ಜನರನ್ನು ಬಂಧಿಸಲಾಗಿದೆ … Continue reading ಪಾಲ್ಗಾರ್​ನಲ್ಲಿ ನಡೆದ ಸಾಧುಗಳ ಗುಂಪು ಹತ್ಯೆ: ಬಂಧಿತರಾದ 101 ಜನರಲ್ಲಿ ಒಬ್ಬೇ ಒಬ್ಬ ಬೇರೆ ಧರ್ಮದವನೂ ಇಲ್ಲ ಎಂದ ಮಹಾ ಗೃಹಸಚಿವ