ಐಶ್ವರ್ಯಾ ಮನೆ ಬಳಿಕ ನಟ ವಿಜಯ್​ ನಿವಾಸದಲ್ಲೂ ಕಳ್ಳತನ: ಮನೆಗೆಲಸದಾಕೆ ವಿರುದ್ಧ ದೂರು

ಚೆನ್ನೈ: ತುಂಬಾ ನಂಬಿಕೆ ಇಟ್ಟಿದ್ದ ಮನೆಗೆಲಸದಾಕೆಯಿಂದಲೇ ನಟಿ ಐಶ್ವರ್ಯಾ ರಜಿನಿಕಾಂತ್​ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ತೀವ್ರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ಘಟನೆ ತಮಿಳು ನಟ ಹಾಗೂ ಗಾಯಕ ವಿಜಯ್​ ಯೇಸುದಾಸ್​ ಮನೆಯಲ್ಲಿ ನಡೆದಿದೆ. ವಜ್ರಾಭರಣಗಳು ಸೇರಿದಂತೆ 60 ಸವರನ್​ ಆಭರಣಗಳನ್ನು ಕಳೆದುಕೊಂಡಿರುವುದಾಗಿ ಕಳೆದ ರಾತ್ರಿ ಅಭಿರಾಂಪುರಂ ಪೊಲೀಸ್​ ಠಾಣೆಯಲ್ಲಿ ವಿಜಯ್​ ಕುಟುಂಬ ದೂರು ದಾಖಲಿಸಿದೆ. ವಿಜಯ್​ ಅವರು ಚೆನ್ನೈನ ಅಭಿರಾಂಪುರಂನಲ್ಲಿರುವ ಮೂರನೇ ಬೀದಿಯಲ್ಲಿ ವಾಸವಿದ್ದಾರೆ. ಕಳ್ಳತನದಲ್ಲಿ ಮನೆಗೆಲಸದಾಕೆಯ ಕೈವಾಡ ಇದೆ ಎಂದು ಸಂಶಯ … Continue reading ಐಶ್ವರ್ಯಾ ಮನೆ ಬಳಿಕ ನಟ ವಿಜಯ್​ ನಿವಾಸದಲ್ಲೂ ಕಳ್ಳತನ: ಮನೆಗೆಲಸದಾಕೆ ವಿರುದ್ಧ ದೂರು