ಮಾಸ್ಕ್​ ಧರಿಸಿ, ಡೆಟಾಲ್​ ಹ್ಯಾಂಡ್​ ವಾಶ್​ ತರುವವರಿಗೆ ಮಾತ್ರ ಶಾಲೆಯೊಳಗೆ ಪ್ರವೇಶ: ಶಾಲೆಯ ಆದೇಶಕ್ಕೆ ಕಂಗಾಲಾದ ಪೋಷಕರು

ಮದ್ದೂರು: ರಾಜ್ಯದಲ್ಲಿ ಕರೋನಾ ವೈರಸ್​ ಭೀತಿ ಹೆಚ್ಚಾದ ಹಿನ್ನೆಲೆ ಬೆಂಗಳೂರಿನಲ್ಲಿ 5ನೇ ತರಗತಿವರೆಗಿನ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಸಹ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮದ್ದೂರಿನ ಶಾಲೆಯೊಂದರಲ್ಲಿ ನೀಡಲಾಗಿರುವ ಆದೇಶವು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಮದ್ದೂರು ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ಕರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಮೌಖಿಕ ಆದೇಶವನ್ನು ಹೊರಡಿಸಲಾಗಿದೆ. ವಿದ್ಯಾರ್ಥಿಗಳೆಲ್ಲರೂ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕಾಗಿದ್ದು, ಶಾಲೆಗೆ ಡೆಟಾಲ್​ ಹ್ಯಾಂಡ್​ ವಾಶ್​ ತರಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಒಂದು ವೇಳೆ ಆದೇಶವನ್ನು ಪಾಲಿಸದಿದ್ದಲ್ಲಿ ವಿದ್ಯಾರ್ಥಿಗಳಿಗೆ … Continue reading ಮಾಸ್ಕ್​ ಧರಿಸಿ, ಡೆಟಾಲ್​ ಹ್ಯಾಂಡ್​ ವಾಶ್​ ತರುವವರಿಗೆ ಮಾತ್ರ ಶಾಲೆಯೊಳಗೆ ಪ್ರವೇಶ: ಶಾಲೆಯ ಆದೇಶಕ್ಕೆ ಕಂಗಾಲಾದ ಪೋಷಕರು