ಹೃನ್ಮನ ಸೆಳೆವ ಕೂಸಳ್ಳಿ ಫಾಲ್ಸ್

ವಿಜಯವಾಣಿ ಸುದ್ದಿಜಾಲ ಕುಂದಾಪುರ ಹಸಿರು ವನಸಿರಿಯ ನಡುವೆ ಭೋರ್ಗರೆಯುವ ಸದ್ದು… ಕಾನನದ ಹಸಿರಿನ ಮಧ್ಯೆ ಕ್ಷೀರಸಾಗರವೇ ಧುಮ್ಮಿಕ್ಕುತ್ತಿರುವ ಭಾಸ… ದೂರದಿಂದ ನೋಡುವಾಗ ಬೆಳ್ನೊರೆಯ ಸಾಲು ಅಂಬರದಿಂದ ಭೂಮಿಗೆ ಜಿಗಿಯುತ್ತಿರುವಂತೆ ಗೋಚರ… ಆಹಾ… ಹೃನ್ಮನಗಳಿಗೆಲ್ಲ ಮುದ, ಸಂತಸ. ಇದು, ಕರಾವಳಿ ಪ್ರದೇಶದ ಮಿನಿ ಜೋಗ ಎಂದೇ ಗುರುತಿಸಿಕೊಂಡ ಕೂಸಳ್ಳಿ ಜಲಪಾತದ ವೈಭವ-ಸೊಬಗಿನ ಪರಿ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಶಿರೂರು ಸಮೀಪದ ಕೂಸಳ್ಳಿ ಫಾಲ್ಸ್‌ಗೆ ವರುಣದೇವ ಜೀವಕಳೆ ತಂದಿದ್ದಾನೆ. ನೂರಾರು ಅಡಿ ಎತ್ತರದಿಂದ ಭೋರ್ಗರೆಯುತ್ತ ಧುಮ್ಮಿಕ್ಕುವ ಜಲಪಾತ ನೋಡುವುದೇ … Continue reading ಹೃನ್ಮನ ಸೆಳೆವ ಕೂಸಳ್ಳಿ ಫಾಲ್ಸ್