ವಾರ್ನರ್ ಗಾಯದಿಂದ ಅಲಭ್ಯ, ಪ್ಯಾಟ್ ಕಮ್ಮಿನ್ಸ್‌ಗೆ ವಿಶ್ರಾಂತಿ

ಸಿಡ್ನಿ: ಆಸ್ಟ್ರೇಲಿಯಾದ ಎಡಗೈ ಆರಂಭಿಕ ಡೇವಿಡ್ ವಾರ್ನರ್ ಗಾಯದಿಂದಾಗಿ ಭಾರತ ವಿರುದ್ಧದ ಸೀಮಿತ ಓವರ್ ಸರಣಿಯ ಬಾಕಿ ಉಳಿದಿರುವ 4 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. 2ನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಅವರು ತೊಡೆಸಂದು ಗಾಯಕ್ಕೊಳಗಾಗಿದ್ದರು. ಇದೇ ವೇಳೆ, ಕಾರ್ಯದೊತ್ತಡದ ದೃಷ್ಟಿಯಿಂದ ಆಸೀಸ್ ತಂಡದ ಪ್ರಮುಖ ವೇಗಿ ಹಾಗೂ ಉಪನಾಯಕ ಪ್ಯಾಟ್ ಕಮ್ಮಿನ್ಸ್ ಅವರಿಗೆ ಸೀಮಿತ ಓವರ್ ಸರಣಿಯ ಉಳಿದ ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ. ಮೊದಲೆರಡು ಏಕದಿನ ಪಂದ್ಯಗಳಲ್ಲಿ 69, 83 ರನ್ ಸಿಡಿಸಿ ಮಿಂಚಿದ್ದ ವಾರ್ನರ್, ಡಿಸೆಂಬರ್ … Continue reading ವಾರ್ನರ್ ಗಾಯದಿಂದ ಅಲಭ್ಯ, ಪ್ಯಾಟ್ ಕಮ್ಮಿನ್ಸ್‌ಗೆ ವಿಶ್ರಾಂತಿ