ಆ. 12ರವರೆಗೆ ದೇಶಾದ್ಯಂತ ಎಲ್ಲ ಪ್ಯಾಸೆಂಜರ್ ರೈಲುಗಳು ರದ್ದು

ನವದೆಹಲಿ: ನಿತ್ಯ ಸಂಚರಿಸುವ ಎಲ್ಲ ಪ್ರಯಾಣಿಕ ರೈಲುಗಳ ಸೇವೆಯನ್ನು ಆಗಸ್ಟ್ 12ರವರೆಗೆ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಗುರುವಾರ ಸಂಜೆ ತಿಳಿಸಿದೆ. ಈ ರೈಲುಗಳಿಗೆ ಮುಂಗಡವಾಗಿ ಕಾಯ್ದಿರಿಸಲಾಗಿದ್ದ ಟಿಕೆಟ್‌ಗಳನ್ನು ರದ್ದು ಮಾಡಿ, ಪ್ರಯಾಣಿಕರಿಗೆ ಪೂರ್ತಿ ಹಣ ಪಾವತಿಸಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರ್ಚ್ ಕೊನೆಯ ವಾರದಿಂದ ಪ್ರಯಾಣಿಕರ ರೈಲು ಸೇವೆ ಸ್ಥಗಿತಗೊಂಡಿದೆ. ವಲಸೆ ಕಾರ್ಮಿಕರ ರವಾನೆಗಾಗಿ ಶ್ರಮಿಕ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಿದ್ದವು. ಅನ್‌ಲಾಕ್ 1.0ರಲ್ಲಿ ಕೆಲ ಮಾರ್ಗಗಳಲ್ಲಿ ನಿಯಮಿತವಾಗಿ ಪ್ರಯಾಣಿಕರ ರೈಲು … Continue reading ಆ. 12ರವರೆಗೆ ದೇಶಾದ್ಯಂತ ಎಲ್ಲ ಪ್ಯಾಸೆಂಜರ್ ರೈಲುಗಳು ರದ್ದು