ಯುಕೆಯಲ್ಲಿ 2ನೇ ವಿಶ್ವಯುದ್ಧದ ಬಾಂಬ್​ ಸ್ಫೋಟ! ನಿಷ್ಕ್ರಿಯಗೊಳಿಸುವ ಪ್ರಯತ್ನ ವಿಫಲ

ಲಂಡನ್​: ಈವರೆಗೂ ಪತ್ತೆಯಾಗದಿರುವ ಎರಡನೇ ವಿಶ್ವಯುದ್ಧದ ಸ್ಫೋಟಗೊಳ್ಳದ ಸಾವಿರಾರು ಬಾಂಬ್​ಗಳು ಪ್ರಪಂಚಾದ್ಯಂತ ಇರುವ ಸಾಧ್ಯತೆ ಇದೆ. ಈ ಹಿಂದೆ ಸ್ಫೋಟಕ ತಜ್ಞರು ಸಾವಿರಾರು ಜನರು ವಾಸಿಸುವ ಪ್ರದೇಶಗಳಲ್ಲಿ ಇಂತಹ ಬಾಂಬ್​ಗಳನ್ನು ನಿಷ್ಕ್ರಿಯೆಗೊಳಿಸಿದ ಉದಾಹರಣೆಗಳಿವೆ. ತೀರಾ ಇತ್ತೀಚೆಗೆ ನಾರ್ಫೋಲ್ಕ್​ನ ಗ್ರೇಟ್ ಯಾರ್ಮೌಥ್​ ಪಟ್ಟಣದಲ್ಲಿ​ 2ನೇ ವಿಶ್ವಯುದ್ಧದ ಬಾಂಬ್​ ಒಂದು ಆಕಸ್ಮಿಕವಾಗಿ ಸ್ಫೋಟಗೊಂಡಿರುವುದಾಗಿ ಬ್ರಿಟಿಷ್​ ಎಮರ್ಜೆನ್ಸಿ ಸರ್ವೀಸ್​ ಆ್ಯಂಡ್​ ಏಜೆನ್ಸೀಸ್​ ಘೋಷಣೆ ಮಾಡಿದೆ. ನಾರ್ಫೋಲ್ಕ್​ ಪೊಲೀಸರ ಪ್ರಕಾರ ಇದೊಂದು ಯೋಜಿತವಲ್ಲದ ಸ್ಫೋಟವಾಗಿದೆ. ತಜ್ಞರು ಬಾಂಬ್​ ಅನ್ನು ನಿಷ್ಕ್ರಿಯಗೊಳಿಸಲು ಯತ್ನಿಸುತ್ತಿರುವಾಗಲೇ ಸ್ಫೋಟಗೊಂಡಿದೆ. … Continue reading ಯುಕೆಯಲ್ಲಿ 2ನೇ ವಿಶ್ವಯುದ್ಧದ ಬಾಂಬ್​ ಸ್ಫೋಟ! ನಿಷ್ಕ್ರಿಯಗೊಳಿಸುವ ಪ್ರಯತ್ನ ವಿಫಲ