ದೇಶದಲ್ಲಿ 3 ತಿಂಗಳು ಭಾರಿ ತಾಪ

ನವದೆಹಲಿ: ದೇಶದಲ್ಲಿ ಇನ್ನು ಮೂರು ತಿಂಗಳು ಬಿಸಿಲ ಬೇಗೆ ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ಕೇಂದ್ರ ಮತ್ತು ಪಶ್ಚಿಮ ಪರ್ಯಾಯ ದ್ವೀಪದ ಭಾಗಗಳು ತೀವ್ರ ಉರಿಯೊಂದಿಗೆ ಕೆಟ್ಟ ಪರಿಣಾಮ ಎದುರಿಸಬೇಕಾಗಲಿದೆ ಎಂದೂ ಎಚ್ಚರಿಕೆ ನೀಡಿದೆ. ದೇಶದ ಹಲವೆಡೆ ಏಪ್ರಿಲ್-ಜೂನ್ ಅವಧಿಯಲ್ಲಿನ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತಲೂ ಅಧಿಕವಿರಲಿದೆ. ಮುಂದಿನ ವಾರದಲ್ಲಿ ದೇಶದ ವಿವಿಧೆಡೆ ಗರಿಷ್ಠ ತಾಪಮಾನ ಕ್ರಮೇಣ 2ರಿಂದ 3 ಡಿ.ಸೆ. ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯ ಡೈರೆಕ್ಟರ್ ಜನರಲ್ ಮೃತ್ಯುಂಜಯ ಮೊಹಪಾತ್ರ … Continue reading ದೇಶದಲ್ಲಿ 3 ತಿಂಗಳು ಭಾರಿ ತಾಪ