ಮುನ್ನಾರ್​ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 23ಕ್ಕೆ ಏರಿಕೆ; ಅವಶೇಷದಡಿಯಿಂದ 5 ಶವಗಳು ಹೊರಕ್ಕೆ

ಇಡುಕ್ಕಿ: ಮುನ್ನಾರ್​ ಭೂಕುಸಿತದಲ್ಲಿ ಮಣ್ಣಿನ ಅವಶೇಷದಡಿ ಸಿಲುಕಿಕೊಂಡಿರಬಹುದಾದವರ ನಿಖರವಾದ ಸಂಖ್ಯೆಯ ಕುರಿತು ಗೊಂದಲ ಮುಂದುವರಿದಿದೆ. ಈ ನಡುವೆ ರಕ್ಷಣಾ ಕಾರ್ಯದಲ್ಲಿ ತೊಡಗಿರುವವರು ಮಣ್ಣಿನ ಅವಶೇಷದಡಿಯಿಂದ ಐದು ಶವಗಳನ್ನು ಹೊರತೆಗೆದಿದ್ದು, ದುರಂತದಲ್ಲಿ ಸತ್ತವರ ಸಂಖ್ಯೆ 23ಕ್ಕೆ ಹೆಚ್ಚಳವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್​ಡಿಆರ್​ಎಫ್​), ಡಿಫೆನ್ಸ್​ ಸೆಕ್ಯೂರಿಟಿ ಕೋರ್​ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಪೆಟ್ಟಿಮುಡಿ ತಲುಪಿದ್ದು, ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಬಲ ಬಂದಂತಾಗಿದೆ. ಪೆಟ್ಟಿಮುಡಿ ಬೆಟ್ಟದ ಸುತ್ತಮುತ್ತಲ ಪ್ರದೇಶದಲ್ಲಿ ಹಲವು ಸೇತುವೆಗಳು ಮತ್ತು ರಸ್ತೆಗಳು ಕೊಚ್ಚಿ ಹೋಗಿರುವುದರಿಂದ, … Continue reading ಮುನ್ನಾರ್​ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 23ಕ್ಕೆ ಏರಿಕೆ; ಅವಶೇಷದಡಿಯಿಂದ 5 ಶವಗಳು ಹೊರಕ್ಕೆ