ಇಪಿಎಫ್ ಕುರಿತ ದೂರುಗಳಿಗೆ ಪೋರ್ಟಲ್: ಪಿಂಚಣಿದಾರರು, ಉದ್ಯೋಗದಾತರಿಗೆ ಅನುಕೂಲ

ನವದೆಹಲಿ: ಕಾರ್ವಿುಕರ ಭವಿಷ್ಯ ನಿಧಿ (ಇಪಿಎಫ್) ಚಂದಾದಾರರು ಕುಂದುಕೊರತೆ ಬಗ್ಗೆ ಆನ್​ಲೈನ್ ಮೂಲಕವೇ ದೂರು ಸಲ್ಲಿಸಬಹುದಾಗಿದೆ. ಇದಕ್ಕಾಗಿ ಕುಂದುಕೊರತೆ ನಿರ್ವಹಣಾ ವ್ಯವಸ್ಥೆಯನ್ನು (ಇಪಿಎಫ್​ಐಜಿಎಂಎಸ್) ಕಾರ್ವಿುಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಚಾಲನೆಗೆ ತಂದಿದೆ. ಚಂದಾದಾರರು ದೂರನ್ನು ಯಾವುದೇ ಸ್ಥಳದಿಂದ ಬೇಕಾದರೂ ಸಲ್ಲಿಸಬಹುದಾಗಿದ್ದು, ಅದು ಇಪಿಎಫ್​ಒ ಕುಂದುಕೊರತೆ ವಿಭಾಗಕ್ಕೆ ಬಂದು ತಲುಪಲಿದೆ. ಅಷ್ಟು ಮಾತ್ರವಲ್ಲದೆ ದೂರಿನ ಸ್ಥಿತಿಗತಿಯನ್ನು ಚಂದಾದಾರರು ಆನ್​ಲೈನ್ ಮೂಲಕವೇ ಪರಿಶೀಲಿಸಬಹುದಾಗಿದೆ.ಈ ಪೋರ್ಟಲ್ ಮೂಲಕ ಇಪಿಎಫ್ ಚಂದಾದಾರರು ಮಾತ್ರವಲ್ಲದೆ ಇಪಿಎಸ್ ಪಿಂಚಣಿದಾರರು, ಉದ್ಯೋಗದಾತರು ಸಹ ದೂರು ನೀಡಬಹುದು. … Continue reading ಇಪಿಎಫ್ ಕುರಿತ ದೂರುಗಳಿಗೆ ಪೋರ್ಟಲ್: ಪಿಂಚಣಿದಾರರು, ಉದ್ಯೋಗದಾತರಿಗೆ ಅನುಕೂಲ