ಮಾದಕವಸ್ತು ಸಾಗಿಸುತ್ತಿದ್ದ ಆಫ್ರಿಕನ್​ ಮಹಿಳೆಯರು ಅಂದರ್; ಸ್ಯಾನಿಟರಿ ಪ್ಯಾಡ್​ನಲ್ಲಿತ್ತು 5 ಕೋಟಿ ರೂ. ಮೌಲ್ಯದ ಕೊಕೇನ್​

ಮುಂಬೈ: ಮಾದಕವಸ್ತು ಕೊಕೇನ್​ ಕಳ್ಳಸಾಗಾಟ ಮಾಡುತ್ತಿದ್ದ ಮೂರು ಆಫ್ರಿಕನ್​ ಮಹಿಳೆಯರನ್ನು ಕಂದಾಯ ಬೇಹುಗಾರಿಕೆ ನಿರ್ದೇಶನಾಲಯ (ಡಿಆರ್​ಐ) ಅಧಿಕಾರಿಗಳು ಮುಂಬೈ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಅವರಿಂದ ವಶಪಡಿಸಿಕೊಂಡ ಕೊಕೇನ್​ ಮೌಲ್ಯ 5.68 ಕೋಟಿ ರೂಪಾಯಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಯಾನಿಟರಿ ನ್ಯಾಪ್​ಕಿನ್​ಗಳಲ್ಲಿ ಅಡಗಿಸಿಟ್ಟು ಹಾಗೂ ಕ್ಯಾಪ್ಸೂಲ್​ ರೂಪದಲ್ಲಿ ಸೇವಿಸುವ ಮೂಲಕ ಅವರು ಈ ಮಾದಕದ್ರವ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ನಿರ್ದಿಷ್ಟ ಗುಪ್ತಚರ ಮಾಹಿತಿ ಆಧಾರದಲ್ಲಿ ಡಿಆರ್​ಐ ಅಧಿಕಾರಿಗಳು ಕಳೆದ ಮೂರು … Continue reading ಮಾದಕವಸ್ತು ಸಾಗಿಸುತ್ತಿದ್ದ ಆಫ್ರಿಕನ್​ ಮಹಿಳೆಯರು ಅಂದರ್; ಸ್ಯಾನಿಟರಿ ಪ್ಯಾಡ್​ನಲ್ಲಿತ್ತು 5 ಕೋಟಿ ರೂ. ಮೌಲ್ಯದ ಕೊಕೇನ್​