ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್​’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ

ಬೆಂಗಳೂರು: ವಿಶ್ವಪರ್ಯಟನೆ ಮಾಡುತ್ತ, ಕನ್ನಡದಲ್ಲೇ ವಿಶ್ವದ ಪರಿಚಯ ಮಾಡಿಸುತ್ತ ಲಕ್ಷಾಂತರ ಜನರ ಮನಸೂರೆಗೊಳಿಸಿರುವ ಡಾ.ಬ್ರೋ (ಗಗನ್ ಶ್ರೀನಿವಾಸ್) ‘ರೋಮಿಂಗ್ ಸ್ಟಾರ್’ ಎಂದರೂ ಅತಿಶಯೋಕ್ತಿ ಅಲ್ಲ. ಅದರಲ್ಲೂ ಇನ್ನೊಂದು ವಿಷಯದಲ್ಲಂತೂ ಅವರನ್ನು ‘ಸೂಪರ್​ ಸ್ಟಾರ್’ ಎಂದೇ ಹೇಳಬಹುದು. ಬಾಲಿವುಡ್ ಮಾತ್ರವಲ್ಲ, ಸ್ಯಾಂಡಲ್​ವುಡ್​ನಲ್ಲೂ ಸಿನಿಮಾ ಸ್ಟಾರ್​ಗಳು ಬೆಟ್ಟಿಂಗ್ ಆ್ಯಪ್​ನಂಥವುಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವುದು ಹೊಸದೇನಲ್ಲ. ಹಾಗೆ ಅಂಥವುಗಳಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಕೆಲವು ಸ್ಟಾರ್ ನಟರು ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದೂ ಉಂಟು. ಆದರೆ ಈ ವಿಷಯದಲ್ಲಿ ಡಾ.ಬ್ರೋ ಸ್ವಯಂನಿಯಂತ್ರಣ ಹಾಕಿಕೊಂಡಿರುವುದನ್ನು ಸ್ಪಷ್ಟಪಡಿಸಿದ್ದಾರೆ. 1 … Continue reading ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್​’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ