ಎಕ್ಸಿಟ್ ಪೋಲ್: ಡಿಎಂಕೆ ತೆಕ್ಕೆಗೆ ತಮಿಳುನಾಡು; ಸಿಎಂ ಆಗ್ತಾರಾ ಕರುಣಾನಿಧಿ ಪುತ್ರ ಸ್ಟಾಲಿನ್?

ನವದೆಹಲಿ: ಪಂಚರಾಜ್ಯಗಳ ಮತದಾನಕ್ಕೆ ಗುರುವಾರ ತೆರೆ ಬಿದ್ದ ಬೆನ್ನಲ್ಲೇ ವಿವಿಧ ಸಂಸ್ಥೆಗಳು ನಡೆಸಿದ ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶಗಳು ಹೊರಬಿದ್ದಿವೆ. ತಮಿಳುನಾಡಿನಲ್ಲಿ ಕಳೆದೆರಡು ಅವಧಿಗಳಿಂದ ಅಧಿಕಾರದಲ್ಲಿದ್ದ ಎಐಎಡಿಎಂಕೆಯನ್ನು ಅಲ್ಲಿನ ಮತದಾರರು ತಿರಸ್ಕರಿಸಿದ್ದಾರೆ ಎಂಬುದು ಬಹುತೇಕ ಎಲ್ಲ ಸಮೀಕ್ಷೆಗಳಿಂದ ದೃಢಪಟ್ಟಿದೆ. ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪುತ್ರ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಮುಂದಿನ ಮುಖ್ಯಮಂತ್ರಿಯಾಗುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ಅವರ ನೇತೃತ್ವದ ಡಿಎಂಕೆಯು ಈಗ ಆಡಳಿತದಲ್ಲಿರುವ ಎಐಎಡಿಎಂಕೆ ಪಕ್ಷದ ವಿರುದ್ಧ ಹೆಚ್ಚು ಸ್ಥಾನಗಳನ್ನು ಗೆದ್ದು ಗದ್ದುಗೆ ಹಿಡಿಯಲಿದೆ ಎಂದಿವೆ … Continue reading ಎಕ್ಸಿಟ್ ಪೋಲ್: ಡಿಎಂಕೆ ತೆಕ್ಕೆಗೆ ತಮಿಳುನಾಡು; ಸಿಎಂ ಆಗ್ತಾರಾ ಕರುಣಾನಿಧಿ ಪುತ್ರ ಸ್ಟಾಲಿನ್?